

ಮಡಿಕೇರಿ ಮಾ.25 NEWS DESK : ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿಯ ಮಧುಕೃಪದ ಆವರಣದಲ್ಲಿ “ಬಾಲಗೋಕುಲ” ಮಡಿಕೇರಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಾ.31 ರಿಂದ ಏ.9 ರ ವರೆಗೆ ಮಕ್ಕಳಿಗಾಗಿ “ವಸಂತ ಶಿಬಿರ – 2025” ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದ ಈ ಶಿಬಿರವು ಮಕ್ಕಳಿಗೆ ಬಹಳ ಉಪಯುಕ್ತವಾಗಿದ್ದು, ಮಕ್ಕಳು ತುಂಬಾ ಉತ್ಸಾಹದಿಂದ ಭಾಗವಹಿಸುವಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ನೊಂದಣಿಗಾಗಿ ಬಾಲಗೋಕುಲ ಮಡಿಕೇರಿ: 9448541328 ಸಂಪರ್ಕಿಸಬಹುದಾಗಿದೆ.