













ಮಡಿಕೇರಿ ಮಾ.31 NEWS DESK : ಮನುಷ್ಯನ ಮನಸ್ಸು ಶುದ್ಧೀಕರಣಗೊಂಡಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಅಭಿಪ್ರಾಯಪಟ್ಟರು. ಮುಸ್ಲಿಮ್ ಬಾಂಧವರ ಈದುಲ್ ಫಿತ್ರ್ ಹಬ್ಬದ ಈದ್ ನಮಾಝ್ ನೇತೃತ್ವ ವಹಿಸಿ ಕಂಡಕರೆ ಮಸ್ಜಿದ್ ತಖ್ವಾದಲ್ಲಿ ಮಾತನಾಡಿದ ಅವರು, ಮನಸ್ಸಿನಲ್ಲಿ ದ್ವೇಷ,ಅಸೂಯೆ ಇರಿಸಿಕೊಂಡು ಜೀವನ ನಡೆಸಬಾರದು. ಮನುಜರ ಮನಸ್ಸು ಸದಾ ಕಾಲ ಶುದ್ಧೀಕರಣದಿಂದರಬೇಕು. ಅದಲ್ಲದೇ ಮನಸ್ಸಿನಲ್ಲೊಂದು,ಹೊರಗಡೆ ಒಂದು ವ್ಯಕ್ತಿತ್ವ ಇರಬಾರದು. ನಮ್ಮ, ನಡೆ,ನುಡಿ ನೇರವಾಗಿರಬೇಕು ಎಂದು ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಯುವ ಸಮುದಾಯ ಬಲಿಯಾಗುತ್ತಿದ್ದಾರೆ. ಡ್ರಗ್ಸ್, ಗಾಂಜಾ,ಇನ್ನಿತರ ಮಾದಕ ವ್ಯಸನಗಳಿಂದ ಯುವಕರು ದೂರವಿದ್ದು ಸಮಾಜದ ಯಶಸ್ವಿಗೆ ದುಡಿಯಬೇಕು ಎಂದು ಮುಸ್ತಫಾ ಸಖಾಫಿ ಕರೆ ನೀಡಿದರು. ಈದುಲ್ ಫಿತ್ರ್ ನಮಾಝಿನ ಬಳಿಕ ಕಂಡಕರೆ ಖಬರ್ ಸ್ಥಾನದಲ್ಲಿ ಮರಣವೊಂದಿದವರಿಗೆ ವಿಶೇಷ ಪಾರ್ಥನೆ ನೆರವೇರಿಸಲಾಯಿತು. ನಂತರ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡುವುದರ ಮೂಲಕ ಈದುಲ್ ಫಿತ್ರ್ ಶುಭಕೋರಿದರು. ಈ ಸಂದರ್ಭ ಮಹಮ್ಮದ್ ಮುಸ್ಲಿಯಾರ್,ಕಂಡಕರೆ ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ,ಉಪಾಧ್ಯಕ್ಷ ಕೆ.ಎ.ಹುಸೈನ್, ಪ್ರ.ಕಾರ್ಯದರ್ಶಿ ಸರ್ಫುದ್ದೀನ್, ಸಹ ಕಾರ್ಯದರ್ಶಿ ಪಿ.ಎಂ ಗಫೂರ್ ಮತ್ತಿತರರು ಇದ್ದರು.