

































ಮಡಿಕೇರಿ ಮಾ.31 NEWS DESK : ಮಡಿಕೇರಿಯ ಸಿ.ಪಿ.ಸಿ ಲೇಔಟ್‍ನ ಮಸ್ಜಿದ್ ಉರ್ ರ್ರಹ್ಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮ್ಮರ್ ಮೌಲವಿ ಮಾತನಾಡಿ ಕಳೆದ ಒಂದು ತಿಂಗಳಿನಿಂದ ರಂಜಾ಼ನ್ ಉಪವಾಸ ವ್ರತದಿಂದ ಲಭಿಸಿದ ತರಬೇತಿ, ದೇವ ಭಯ ಹಾಗೂ ಆಧ್ಯಾತ್ಮಿಕತೆಯನ್ನು ಮುಂದೆಯೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ನಾವು ಅನುಭವಿಸುತ್ತಿರುವ ಸುಖ ಸೌಕರ್ಯಗಳು, ಆಸ್ತಿ-ಅಂತಸ್ತು ಹಾಗೂ ಸಂಪತ್ತು ಆ ದೇವನ ಅನುಗ್ರಹವಾಗಿದೆ. ಆದರಿಂದ ಅಲ್ಲಾಹನ ಇಷ್ಟ ದಾಸರಾಗಬೇಕು. ಇಂದು ಲೋಕದಲ್ಲಿ ಯಾರದ್ದೊ ಸ್ವಾರ್ಥ ಹಿತಾಸಕ್ತಿಗಳಿಂದಾಗಿ ನಿರಂತರ ಯುದ್ದಗಳ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ ನಿರಪರಾಧಿಗಳ ಹತ್ಯೆಯಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಅವರ ವಿಮೋಚನೆಗಾಗಿ ಪ್ರಾರ್ಥಿಸಬೇಕು, ಪರಸ್ಪರ ಪ್ರೀತಿ ಮತ್ತು ವಿಶ್ವಾಸ ಹಾಗು ಸೇವಾ ಮನೋಭಾವವನ್ನು ಅಳವಡಿಸಬೇಕು. ಇಂದು ಸಮಾಜಕ್ಕೆ ಮಾರಕವಾಗಿ ಪರಿಣಮಿಸಿರುವ ಮಾದಕ ವ್ಯಸನದ ವಿರುದ್ಧ ಜಾತಿ ಮತ ಬೇಧವಿಲ್ಲದೇ ಒಂದಾಗಿ ಹೋರಾಡಬೇಕು. ಯುವಕರು, ಯುವತಿಯರು ಮತ್ತು ಸಣ್ಣ ಮಕ್ಕಳು ಕೂಡ ಇದಕ್ಕೆ ಬಲಿಯಾಗುತ್ತಿರುವುದು ಅತಿ ದೊಡ್ಡ ದುರಂತ ಇಂತಹ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಜಾಮಿಯಾ ಮಸೀದಿಯ ಧರ್ಮ ಗುರು ಮೌ | ನಸೀಮ್ ಅಕ್ತರ್, ಕ್ರೆಸೆಂಟ್ ಶಾಲಾ ಕಾರ್ಯದರ್ಶಿ ಜಿ.ಹೆಚ್.ಮೊಹಮ್ಮದ್ ಹನೀಫ್, ತನಲ್ ಆಶ್ರಮ ಅಧ್ಯಕ್ಷ, ಮೊಹಮ್ಮದ್ ಮುಸ್ತಫ, ನಗರಸಭಾ ಮಾಜಿ ಸದಸ್ಯ ಮುನೀರ್ ಅಹಮದ್, ಶಾಹಿನ್ ಶಿಕ್ಷಣ ಸಂಸ್ಥೆಯ ಸಿ.ಇ.ಓ ತೌಶೀಫ್ ಮಡಿಕೇರಿ ಹಾಗೂ ಪತ್ರಕರ್ತ ಅಬ್ದುಲ್ಲಾ ಹಾಜರಿದ್ದು, ಶುಭ ಹಾರೈಸಿದರು. ಮುಂಜಾನೆ ಜಾಥಾ ಬದ್ರಿಯಾ ಮಸೀದಿಯಿಂದ ಆರಂಭಗೊಂಡು ಇಂದಿರಾ ಗಾಂಧಿ ವೃತ ದ ಮೂಲಕ ಮಹದೇವ ಪೇಟೆಗೆ ಹಾದು ಜಾಮೀಯಾ ಮಸಿದಿ ಮೂಲಕ ನೇರವಾಗಿ ಏ.ವಿ ಶಾಲೆ ರಸ್ತೆಯಿಂದ ನೇರವಾಗಿ ಈದ್ಗಾ ಮೈದಾನಕ್ಕೆ ತೆರಳಲಾಯಿತು. ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಜಮಾಜ್ ಸಲ್ಲಿಸಿದರು. ನಂತರ ವಿಶೇಷ ಸಿಹಿ ಖಾದ್ಯಗಳನ್ನು ನೀಡಿ ಪರಸ್ಪರ ಶುಭ ಹಾರೈಸಿದರು.