













ಮಡಿಕೇರಿ, ಮಾ.31 NEWS DESK : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯ ಉದ್ಘಾಟನೆಯನ್ನು ಕೂಡುಮಂಗಳೂರು ಗ್ರಾ.ಪಂ ಸದಸ್ಯ ಎಂ.ಕೆ.ಚಂದ್ರು ಮೂಡ್ಲಿಗೌಡ, ನೆರವೇರಿ ನಂತರ ಮಾತಾನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟದ ಆಯೋಜನೆಯಿಂದ ಯುವಕರು ಸಂಘಟನ್ಮಾಖವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರವಾಗುವುದು ಎಂದರು. ಕುಶಾಲನಗರ ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ.ನಾಗರಾಜಶೆಟ್ಟಿ ಮಾತಾನಾಡಿ, ಮನುಷ್ಯನ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ, ಕ್ರೀಡಾ ಮನೋಭಾವವನ್ನು ಪ್ರತಿಯೊಬ್ಬ ಯುವಕರು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಉದ್ಯಮಿ ಉಮಾಶೆಂಕರ್ ಮಾತಾನಾಡಿ, ಯುವ ಜನಾಂಗ ಸಂಘಟನೆಯಾದರೆ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ. ಗ್ರಾಮಾಂತರ ಕ್ರೀಡಾ ಪ್ರತಿಭೆಗಳ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟಗಳು ಪೂರಕ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭ ಸದಸ್ಯೆ ಗೌರಮ್ಮ, ಗ್ರಾ.ಪಂ ಮಾಜಿ ಸದಸ್ಯ ಚಂದ್ರಶೇಖರ್, ರಾಜ್ಯ ವಾಲಿಬಾಲ್ ಕ್ರೀಡಾಪಟು ಸೋಮಶೇಖರ್, ಮಹಮ್ಮದ್ ಸೇರಿದಂತೆ ವಾಲಿಬಾಲ್ ತಂಡದ ಮಾಲೀಕರು, ಸಂಘದ ಪದಾಧಿಕಾರಿಗಳಾದ ರವಿ, ಸತೀಶ್, ರೋಹಿತ್, ಅಭಿಷೇಕ್, ಪ್ರಸಾದ್, ರಾಕೇಶ್, ಧನು ಸೇರಿದಂತೆ ಕ್ರೀಡಾಭಿಮಾನಿಗಳು, ಗ್ರಾಮಸ್ಥರು ಹಾಜರಿದ್ದರು.
ಪಂದ್ಯಾವಳಿ ವಿಜೇತ ತಂಡ :: ವಾಲಿಬಾಲ್ ನಲ್ಲಿ ಸಿಕ್ಸ್ ತಂಡ ಪ್ರಥಮ, ಪಕ್ಷಿ ಫ್ರೆಂಡ್ಸ್ ದ್ವಿತೀಯ, ಕುಳ್ಳ ಫ್ರೆಂಡ್ಸ್ ತಂಡ ತೃತೀಯ, ಥ್ರೋಬಾಲ್ ನಲ್ಲಿ ಚೌಡಮ್ಮ ತಂಡ ಪ್ರಥಮ, ಬಸವೇಶ್ವರ ತಂಡ ದ್ವಿತೀಯ, ಬಹುಮಾನ ವಿತರಣೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯೆ ಫಿಲೋಮಿನಾ ನೆರವೇರಿಸಿದರು.