


































ಗೋಣಿಕೊಪ್ಪ ಮಾ.31 NEWS DESK : ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ವಾರ್ಷಿಕ ಮಹಾಸಭೆ ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಗೋಣಿಕೊಪ್ಪ ಸ್ಪೈಸ್ ರ್ಯಾಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಾಳೆಕುಟ್ಟಿರ ಕಪ್ ಕೇರ್ಬಲಿ ನಮ್ಮೆಯ ಕ್ರೀಡಾಕೂಟ ನಿರ್ದೇಶಕರಾಗಿ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಸಹನಿರ್ದೇಶಕರಾಗಿ ಚೆಟ್ಟಂಗಡ ರವಿ ಸುಬ್ಬಯ್ಯ, ತಾಂತ್ರಿಕ ವೇದಿಕೆಯ ಮುಖ್ಯಸ್ಥರಾಗಿ ಕೊಣಿಯಂಡ ಮಂಜು ಮಾದಯ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮುಂದಿನ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಉಪಾಧ್ಯಕ್ಷರಾಗಿ ಚೆಟ್ಟಂಗಡ ರವಿ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉಳುವಂಗಡ ಲೋಹಿತ್ ಭೀಮಯ್ಯ, ಸಹ ಕಾರ್ಯದರ್ಶಿಯಾಗಿ ಚೆಟ್ಟಂಗಡ ಕಂಬ ಕಾರ್ಯಪ್ಪ ಪುನರಾಯ್ಕೆಯಾದರು. ಖಜಾಂಚಿಯಾಗಿ ಜಮ್ಮಡ ಗಿಲ್, ಸಹ ಖಜಾಂಚಿಯಾಗಿ ಪೊನ್ನೋಲತಂಡ ಯಶು, ನಿರ್ದೇಶಕರಾಗಿ ಕೊಣಿಯಂಡ ಮಂಜು ಮಾದಯ್ಯ, ಮುಂಡಚಾಡಿರ ಭರತ್, ಪೊನ್ನೋಲತಂಡ ಪ್ರತಿನ್, ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಪೊನ್ನೋಲತಂಡ ಹರೀಶ್, ಬೊಟ್ಟೋಳಂಡ ಚೇತನ್ ಹಾಗೂ ಪೊನ್ನೋಲತಂಡ ಗಂಗಮ್ಮ ಅವರನ್ನು ಆಯ್ಕೆ ಮಾಡಲಾಯಿತು. ದಾನಿಗಳಾದ ಕೊಣಿಯಂಡ ಸಂಜು ಹಾಗೂ ಮುಂಡಚಾಡಿರ ರಿನಿ ಭರತ್’ ಅವರಿಗೆ ಅಕಾಡೆಮಿಯ ಗೌರವ ಸದಸ್ಯತ್ವ ನೀಡಲಾಯಿತು. ಸಭೆಯಲ್ಲಿ ಕಾಟನ್ ಹಗ್ಗದ ದಾನಿಗಳಾದ ಚೆಟ್ಟಂಗಡ ಕಂಬ ಕಾರ್ಯಪ್ಪ, ಕೊಣಿಯಂಡ ಸಂಜು ಹಾಗೂ ಮುಂಡಚಾಡಿರ ರಿನಿ ಭರತ್’ರನ್ನು ಅಭಿನಂದಿಸಲಾಯಿತು. ಮುಂದಿನ ದಿನಗಳಲ್ಲಿ ಕೊಡವ ಒಕ್ಕಡೊಕ್ಕಡ ಕೇರ್ಬಲಿ ನಮ್ಮೆಗೆ ಮತ್ತಷ್ಟು ಮೆರುಗು ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಈ ವರ್ಷ ಕೊಡವ ಒಕ್ಕಡೊಕ್ಕಡ ಕೇರ್ ಬಲಿ ನಮ್ಮೆಯನ್ನು ನಡೆಸುವ ಬಾಳೆಕುಟ್ಟಿರ ಕುಟುಂಬಕ್ಕೆ ಅತಿ ಹೆಚ್ಚು ಕುಟುಂಬ ತಂಡಗಳು ನೋಂದಾಯಿಸಿಕೊಳ್ಳುಲು ನಮ್ಮೆ ಅತ್ಯುತ್ತಮವಾಗಿ ನಡೆಯಲು ಬೇಕಾಗುವ ಎಲ್ಲಾ ಸಹಕಾರವನ್ನು ಕೊಡವ ಟಗ್ ಆಫ್ ವಾರ್ ಅಕಾಡೆಮಿಯು ನೀಡುವುದರೊಂದಿಗೆ ಒಟ್ಟಾರೆಯಾಗಿ ಈ ಕೇರ್ ಬಲಿ ನಮ್ಮೆಯು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.