Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*
  • *ಮೇ 12 ರಂದು ಉದ್ಯೋಗ ಮೇಳ*
  • *ಹುದ್ದೆಗೆ ಅರ್ಜಿ ಆಹ್ವಾನ*
  • *ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ
  • *ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*
  • *ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*
  • *ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*
  • *ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*
  • *ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*
  • *ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು : ಜನರಲ್ ತಿಮ್ಮಯ್ಯ ಜೀವನ ಪ್ರತಿಯೊಬ್ಬರಿಗೂ ಆದರ್ಶ : ಉಪ ವಿಭಾಗಾಧಿಕಾರಿ ವಿನಾಯಕ ನವಾ೯ಡೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು : ಜನರಲ್ ತಿಮ್ಮಯ್ಯ ಜೀವನ ಪ್ರತಿಯೊಬ್ಬರಿಗೂ ಆದರ್ಶ : ಉಪ ವಿಭಾಗಾಧಿಕಾರಿ ವಿನಾಯಕ ನವಾ೯ಡೆ

ಏಪ್ರಿಲ್ 1, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.1 NEWS DESK : ಜನರಲ್ ತಿಮ್ಮಯ್ಯ ಅವರ ಜೀವನಾದಶ೯ ಪ್ರತಿಯೋವ೯ರಿಗೂ ಸದಾ ಆದಶ೯ಪ್ರಾಯವಾಗಿದೆ. ನಾಯಕರು ಅನೇಕರು ಇದ್ದಾರಾದರೂ ಕೆಲವರು ಮಾತ್ರ ಸದಾ ನಮ್ಮ ಮನಸ್ಸಿನಲ್ಲಿ ಇರಲು ಸಾಧ್ಯ. ಇಂಥ ಮಹಾನ್ ಸೇನಾ ನಾಯಕರಾಗಿದ್ದವರು ಜನರಲ್ ತಿಮ್ಯಯ್ಯನವರು ಎಂದು ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿ ವಿನಾಯಕ ನವಾ೯ಡೆ ಹೇಳಿದ್ದಾರೆ. ಕೊಡಗು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜನ್ಮ ನಿವಾಸ ಸನ್ನಿಸೈಡ್ ನಲ್ಲಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ತಿಮ್ಮಯ್ಯ ಅವರ 119 ನೇ ಜನ್ಮ ಜಯಂತಿಯನ್ನು ತಿಮ್ಮಯ್ಯ ಭಾವಚಿತ್ರಕ್ಕೆ ಪುಪ್ಪಾಚ೯ನೆ ಮಾಡಿ ಅವರು ಮಾತನಾಡಿದರು. ಜನರಲ್ ತಿಮ್ಮಯ್ಯ ಅವರ ಜೀವನ ಪ್ರತೀಯಬ್ಬರಿಗೂ ಆದಶ೯ಪ್ರಾಯ. ಸೇನೆಯೇ ಅವರ ಆತ್ಮವಾಗಿತ್ತು ಹಾಗೇ ಆತ್ಮದಲ್ಲಿಯೇ ಸೇನಾ ಪ್ರೇಮ ಹುದುಗಿತ್ತು ಎಂದು ಸ್ಮರಿಸಿದರು. ಕೊಡಗಿನ ಜನತೆಗೆ ದೇಶಪ್ರೇಮದ ಮನೋಭಾವನೆ ಸಹಜವಾಗಿಯೇ ಹೆಚ್ಚಾಗಿದೆ. ಭವಿಷ್ಯದಲ್ಲಿ ಕೊಡಗಿನಿಂದ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳಿಗೆ ಯುವಪೀಳಿಗೆ ಸೇಪ೯ಡೆಯಾಗಬೇಕೆಂದೂ ಅವರು ಹಾರೈಸಿದರು. ತಾನು ಮಹಾರಾಷ್ಟ್ರದಲ್ಲಿದ್ದಾಗ ಕೊಡಗಿಗೆ ಪ್ರವಾಸ ಬಂದಿದ್ದೆ. ಆಗ ಸೈನಿಕರ ನೆಲೆವೀಡಾದ ಕೊಡಗು ಜಿಲ್ಲೆಯಲ್ಲಿ ಕತ೯ವ್ಯ ಸಲ್ಲಿಸಲು ಅವಕಾಶ ಸಿಕ್ಕಿದ್ದರೆ ಸೂಕ್ತವಿತ್ತು ಎಂದು ಮನಸ್ಸಿನಲ್ಲಿಯೇ ಬಯಸಿದ್ದೆ. ಅಂತೆಯೇ 6 ತಿಂಗಳ ಬಳಿಕ ಇದೇ ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಕತ೯ವ್ಯ ಸಲ್ಲಿಸುವ ಭಾಗ್ಯ ಸಿಕ್ಕಿತು ಎಂದೂ ವಿನಾಯಕ ನವಾ೯ಡೆ ಹಷ೯ವ್ಯಕ್ತಪಡಿಸಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಇಂದಿನ ವಿದ್ಯಾಥಿ೯ಗಳಲ್ಲಿ ಜನರಲ್ ತಿಮ್ಮಯ್ಯ ಅವರ ಕಷ್ಟಕರ ಜೀವನ ಮತ್ತು ಸೇನೆಯಲ್ಲಿ ಅವರು ತೋರಿದ ಅಪ್ರತಿಮ ಪೌರುಷದ ಬಗ್ಗೆ ತಿಳುವಳಿಕೆ ನೀಡುವಂಥ ಪ್ರಯತ್ನವಾಗಬೇಕು ಎಂದರು. ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನೂ ವಿದ್ಯಾಥಿ೯ಗಳು ಸ್ಮರಿಸಬೇಕೆಂದು ಕರೆ ನೀಡಿದ ಮಹೇಶ್ ನಾಚಯ್ಯ, ಫೀಲ್ಡ್ ಮಾಷ೯ಲ್ ಕಾಯ೯ಪ್ಪ, ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆಗೆ ಸರಿಸಾಟಿಯಾದ ಮತ್ತೋವ೯ರು ಜಗತ್ತಿನಲ್ಲಿಯೇ ಇಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದರು. ತಿಮ್ಮಯ್ಯ ಅವರ ಜೀವನ ಬೆಂಕಿಯಲ್ಲಿ ಬಿದ್ದಂತಿತ್ತು. ಆ ಕಷ್ಟಕರ ಜೀವನಕ್ರಮದ ಬಗ್ಗೆ ವಿದ್ಯಾಥಿ೯ಗಳಿಗೆ ತಿಳುವಳಿಕೆ ಇರಬೇಕೆಂದು ಅಭಿಪ್ರಾಯಪಟ್ಟ ಮಹೇ್ಶ್ ನಾಚಯ್ಯ, ಜನರಲ್ ತಿಮ್ಮಯ್ಯ ಅವರ ಪರಿಶ್ರಮದಿಂದಾಗಿಯೇ ಭಾರತೀಯರಾದ ನಾವಿಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದರು. ಪೂಜಾಕೋಣೆಯಲ್ಲಿ ದೇವರ ಫೋಟೋಗಳೊಂದಿಗೇ ಫೀಲ್ಡ್ ಮಾಷ೯ಲ್ ಕಾಯ೯ಪ್ಪ, ಜನರಲ್ ತಿಮ್ಮಯ್ಯ ಅವರ ಫೋಟೋಗಳನ್ನಿಟ್ಟು ನಿತ್ಯ ಪೂಜೆ ಮಾಡುವಷ್ಟು ಅಹ೯ತೆಯನ್ನು ಈ ಮಹಾನ್ ಸೇನಾನಿಗಳು ಪಡೆದಿದ್ದಾರೆ ಎಂದೂ ಮಹೇಶ್ ನಾಚಯ್ಯ ಹೇಳಿದರು. ಇಂಥ ಸೇನಾನಿಗಳನ್ನು ಸದಾ ಸ್ಮರಿಸುವುದೇ ಅವರಿಗೆ ನಾವು ಸಲ್ಲಿಸುವ ನೈಜ ಗೌರವವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಕಾಯ೯ಕ್ರಮದಲ್ಲಿ ಸುಂಟಿಕೊಪ್ಪದ ಸಕಾ೯ರಿ ಪ್ರಾಥಮಿಕ ಶಾಲೆಯ 9 ನೇ ತರಗತಿ ವಿದ್ಯಾಥಿ೯ನಿ ಎ.ಎಸ್. ಶ್ರೀಷ ಇದೇ ಸಂದಭ೯ ಜನರಲ್ ತಿಮ್ಮಯ್ಯ ಅವರ ಸೇನಾ ಸಾಧನೆಯ ಬಗ್ಗೆ ಹಲವಷ್ಟು ಮಾಹಿತಿಗಳೊಂದಿಗೆ ಮಾತನಾಡಿ, ಎಲ್ಲರ ಮೆಚ್ಚುಗೆ ಗಳಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ಅರಮೇರಿ ಶಾಲಾ ವಿದ್ಯಾಥಿ೯ಗಳಾದ ಮಾನ್ವಿ ಮುತ್ತಪ್ಪ, ಪ್ಯಾರಿಸ ಅವರಿಂದ ನಾಡಗೀತೆ, ಕೊಡಗು ವಿದ್ಯಾಲಯದ ವಿದ್ಯಾಥಿ೯ನಿಯರಾದ ಅನುಷ್ಕ ರವಿಶಂಕರ್, ಶ್ರೇಯ, ಕ್ಯಾತಿ ಪ್ರಶಾಂತ್, ಶಾವ೯ರಿ ರೈ ದೇಶಭಕ್ತಿಗೀತೆಗಳನ್ನು ಹಾಡಿದರು. ತಿಮ್ಮಯ್ಯ ಸ್ಮಾರಕ ಭವನದ ಸಿಬ್ಬಂದಿ ಪೊನ್ನುಕಂಡ ರಮ್ಯ ಮಾಚಯ್ಯ ಅವರು ದೇಶಭಕ್ತಿಗೀತೆಯನ್ನು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇ೯ಶಕ ಕುಮಾರ್ ಸ್ವಾಗತಿಸಿ, ವಂದಿಸಿದರು. ಮಡಿಕೇರಿ ತಹಶೀಲ್ಡಾರ್ ಪ್ರವೀಣ್ ಕುಮಾರ್, ಪೊಲೀಸ್ ಗುಪ್ತದಳದ ವೖತ್ತ ನಿರೀಕ್ಷಕ ಮೇದಪ್ಪ, ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಅಧಿಕಾರಿ ಮಣಜೂರು ಮಂಜುನಾಥ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಂಜು , ಜಿಲ್ಲಾ ಗೌಡ್ಸ್ ಸಂಸ್ಥೆಯ ತರಬೇತಿ ವಿಭಾಗದ ಆಯುಕ್ತೆ ಹೆಚ್. ಮೈಥಿಲಿ ರಾವ್, ಕೊಡಗು ವಿದ್ಯಾಲಯದ ಸಂಗೀತ ಶಿಕ್ಷಕಿ ಪ್ರತಿಭಾ ಮಧುಕರ್, ಪತ್ರಕರ್ತರಾದ ಅನಿಲ್ ಹೆಚ್.ಟಿ., ಬೊಳ್ಳಜೀರ ಅಯ್ಯಪ್ಪ, ನಿವೖತ್ತ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ, ಸಾಹಿತಿ ಜಿ.ಟಿ, ರಾಘವೇಂದ್ರ ಸೇರಿದಂತೆ ಅನೇಕರು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರೆಗ್ಯೂಲರ್ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 12 ರಂದು ಉದ್ಯೋಗ ಮೇಳ*

ಮೇ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 9 NEWS DESK  : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ…

*ಹುದ್ದೆಗೆ ಅರ್ಜಿ ಆಹ್ವಾನ*

ಮೇ 9, 2026

*ಮೇ 10 ರಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಮೇ 9, 2026

*ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದ ಸಂಸದ ಯದುವೀರ್‌ ಒಡೆಯರ್‌*

ಮೇ 9, 2026

*ಎನ್‍ಡಿಎ ಫಲಿತಾಂಶ ಪ್ರಕಟ : ಕ್ರಿಯೇಟಿವ್ ಕಾಲೇಜಿನ 4 ಮಂದಿ ವಿದ್ಯಾರ್ಥಿಗಳು ಆಯ್ಕೆ*

ಮೇ 9, 2026

*ಅರೆಭಾಷೆ ಸಾಂಸ್ಕೃತಿಕ ಸಂಭ್ರಮ : ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಪೂರಕ : ಸದಾನಂದ ಮಾವಜಿ*

ಮೇ 9, 2026

*ಶಾಸಕ ಡಾ.ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರ ಮೆಚ್ಚುಗೆ*

ಮೇ 9, 2026

*ರಾಷ್ಟ್ರಮಟ್ಟದ ಸೆಸ್ಟೋಬಾಲ್ ಕ್ರೀಡೆ : ಮೊದಲ ಬಾರಿಗೆ ಚಿನ್ನ ಗೆದ್ದ ಕರ್ನಾಟಕ ತಂಡ : ಕೀರ್ತಿ ತಂದ ಕೊಡಗಿನ ಕ್ರೀಡಾಪಟುಗಳು*

ಮೇ 9, 2026

*ರಾಷ್ಟ್ರಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ : ಮಡಿಕೇರಿಯ ಅನ್ವಿತ್.ಎಸ್ ಚಾಂಪಿಯನ್*

ಮೇ 9, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ “ಕಲಾ ವೈಭವ” ಉದ್ಘಾಟನೆ : ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ : ಮೇ.ಪ್ರೊ.ರಾಘವ ಬಿ. ಅಭಿಮತ*

ಮೇ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.