




ಮಡಿಕೇರಿ ಏ.1 NEWS DESK : ಮಡಿಕೇರಿ ನಗರದ ಸುರ್ದಶನ ಬಡಾವಣೆಯ ಶ್ರೀ ಮುನೀಶ್ವರ ದೇವಾಲಯದಲ್ಲಿ ಯುಗಾದಿ ಉತ್ಸವ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಅಭಿಷೇಕ, ಅಲಂಕಾರ ಪೂಜೆ, ಹೋಮ ಹವನಾದಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ದೇವಾಲಯದ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿಗೆ ಭಕ್ತರು ಹರಕೆ ಅರ್ಪಿಸಿದರು. ಮಹಾಪೂಜೆ ಮತ್ತು ಮಹಾ ಮಂಗಳಾರತಿಯ ನಂತರ ಅಪಾರ ಸಂಖ್ಯೆಯ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಿತು.