Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*
  • *ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*
  • *ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
  • *ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*
  • *ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*
  • *ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*
  • *ಕೊಡಗು ವಿಶ್ವವಿದ್ಯಾಲಯದ ಮೂರನೇ ಸಂಸ್ಥಾಪನಾ ದಿನಾಚರಣೆ : ಭಾರತದ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಅಗತ್ಯ : ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅಭಿಮತ*
  • *ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ : ಗಮನಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ*
  • *ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ಮಿಲನ ಕೆ.ಭರತ್‍ಗೆ ಬೆಳ್ಳಿ ಪದಕ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಪತ್ರಕತ೯ರ ಸಂಘದಿಂದ ಸಂವಾದ : ಪ್ರವಾಸೋದ್ಯಮ ನವನೀತಿಯಂತೆ ಕೊಡಗಿನಲ್ಲಿ ಹೊಣೆಯರಿತ ಯೋಜನೆಗಳ ಜಾರಿಗೆ ಕ್ರಮ : ಅನಿತಾ ಭಾಸ್ಕರ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಪತ್ರಕತ೯ರ ಸಂಘದಿಂದ ಸಂವಾದ : ಪ್ರವಾಸೋದ್ಯಮ ನವನೀತಿಯಂತೆ ಕೊಡಗಿನಲ್ಲಿ ಹೊಣೆಯರಿತ ಯೋಜನೆಗಳ ಜಾರಿಗೆ ಕ್ರಮ : ಅನಿತಾ ಭಾಸ್ಕರ್*

ಏಪ್ರಿಲ್ 3, 20255 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ  ಏ.3 NEWS DESK : ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಲಾದ ನವನೀತಿಯಂತೆ ಕೊಡಗಿನಲ್ಲಿಯೂ ವಿವಿಧ ಅಭಿವೖದ್ದಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಪರಿಸರ ಸ್ಮೇಹಿ ಪ್ರವಾಸೋದ್ಯಮದ ಜತೆಯಲ್ಲಿಯೇ  ಜವಬ್ದಾರಿಯುತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿದೇ೯ಶಕಿ ಅನಿತಾ ಭಾಸ್ಕರ್ ಹೇಳಿದ್ದಾರೆ. ನಗರದ ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ಕೊಡಗು ಪತ್ರಕತ೯ರ ಸಂಘ (ರಿ) ವತಿಯಿಂದ ಆಯೋಜಿಸಲಾದ ಸಂವಾದ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಅವರು ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು. 2023 ರಲ್ಲಿ ಕೊಡಗು ಜಿಲ್ಲೆಗೆ 43.69 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 2024 ರಲ್ಲಿ45.72 ಲಕ್ಷ ಕೊ ಕೊಡಗಿನ ಪ್ರವಾಸೋದ್ಯಮದ ಪಾಲಿಗೆ ಸ್ವಣ೯ಯುಗ ಎಂಬಂತೆ ದಾಖಲೆಯ 24 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೊಡಗು ಜಿಲ್ಲೆ ಪ್ರವಾಸಿಗರ ಮೆಚ್ಚಿನ ತಾಣವಾಗಿಯೇ ಮುಂದುವರೆದಿದ್ದು ಈ ನಿಟ್ಟಿನಲ್ಲಿ ಮತ್ತಷ್ಟು ಹೊಣೆಯರಿತ ಪ್ರವಾಸೋದ್ಯಮದ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ 2029 ರವರೆಗೆ ಜಾರಿಯಲ್ಲಿಟ್ಟಿರುವ ನವ ನೀತಿಯಂತೆ ಜಾರಿಗೊಳಿಸಲಾಗುತ್ತದೆ ಎಂದು ಅನಿತಾ ಭಾಸ್ಕರ್ ಹೇಳಿದರು. ಈಗಾಗಲೇ ಕೊಡಗಿನ 23 ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ವಿವಿಧ ಪ್ರಗತಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 9 ಗೈಡ್ ಗಳನ್ನು ಪ್ರವಾಸಿ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ನೋಮಕ ಮಾಡಲಾಗುತ್ತದೆ. ಇನ್ನೂ 10 ಪ್ರವಾಸೀ ಮಿತ್ರರು ಕೊಡಗಿನ ಪ್ರವಾಸೀ ತಾಣಗಳಿಗೆ ದೊರಕುವ ಸಾಧ್ಯತೆಿದೆ. ಅಂತೆಯೇ ಒಂದು ಜಿಲ್ಲೆ – ಒಂದು ತಾಣ ಯೋಜನೆಯಡಿ ಕೊಡಗಿನಲ್ಲಿ ಮಾಂದಲಪಟ್ಟಿ ತಾಣವನ್ನು ಗುರುತಿಸಲಾಗಿದ್ದು ಮಾಂದಲಪಟ್ಟಿಯಲ್ಲಿಯೂ ಇಲಾಖೆ ವತಿಯಿಂದ ಪ್ರವಾಸೀ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಕೊಡಗು ಜಿಲ್ಲೆಯನ್ನು ಇದೇ ಮೊದಲ ಬಾರಿಗೆ ಪ್ರವಾಸೀ ಸಕ್ಯೂ೯ಟ್ ಯೋಜನೆಯಡಿ ಸೇಪ೯ಡೆ ಮಾಡಲಾಗುತ್ತದೆ ಎಂದೂ ಅನಿತಾ ಭಾಸ್ಕರ್ ಮಾಹಿತಿ ನೀಡಿದರು. ಮಡಿಕೇರಿಯ ರಾಜಾಸೀಟ್ ಬಳಿಯಲ್ಲಿರುವ ಕೂಗ್೯ ವಿಲೇಜ್ ನಲ್ಲಿ ಕೊಡಗಿನ ಸವಿಕಿತ್ತಳೆಯನ್ನು ಪ್ರಚುರ ಪಡಿಸಲು  ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಹಯೋಗ  ಪಡೆಯಲಾಗಿದೆ ಎಂದು ತಿಳಿಸಿದ ಅನಿತಾ ಭಾಸ್ಕರ್, ಕೂಗ್೯ ವಿಲೇಜ್ ಎಂಬುದೇ ಚಂದದ ಯೋಜನೆಯಾಗಿದ್ದು ಇದನ್ನು ಮತ್ತಷ್ಟು ಪ್ರಚಾರದೊಂದಿಗೆ ಅಭಿವೖದ್ದಿ ಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಜಿಲ್ಲೆಯಲ್ಲಿನ ಪ್ರವಾಸೀ ತಾಣಗಳ ಅಭಿವೖದ್ದಿ ಬಗ್ಗೆ ವಿಶಏಷ ಕಾಳಜಿ ವಹಿಸಿರುವುದಿಂದಾಗಿ ಕೊಡಗು ಈಗ ಡಿಜಿಟಲ್ ಮೀಡಿಯಾ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಂದಶ೯ಖರನ್ನು ತಲುಪಿ ಬಹುತೇಕರು ಕೊಡಗಿನತ್ತ ಬರುವಂತಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಅಂದಾಜು 3,500 ಹೋಂಸ್ಟೇಗಳಿರಬಹುದು ಎಂದು ಅಂದಾಜಿಸಲಾಗಿದ್ದು ಈ ಪೈಕಿ ಪ್ರವಾಸೋದ್ಯಮ ಇಲಾಖೆಯಲ್ಲಿ ಈವರೆಗೂ 2269 ಹೋಂಸ್ಟೇಗಳು ನೋಂದಣಿ ಮಾಡಿಕೊಂಡಿವೆ. ತಿಂಗಳಿಗೆ 30-50 ಹೊಸ ಹೋಂಸ್ಟೇ ಮಾಲೀಕರು  ನೋಂದಣಿಗಾಗಿ ಅಜಿ೯ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ ಅನಿತಾ ಭಾಸ್ಕರ್, ಶಾಸಕ ಎ.ಎಸ್. ಪೊನ್ನಣ್ಣ ಪ್ರಯತ್ನ ಫಲವಾಗಿ ವಿರಾಜಪೇಟೆಯ ಮಲತಿರಿಕೆ ಬೆಟ್ಟ , ಅಬ್ಬಿಫಾಲ್ಸ್, ಬರಪೊಳೆ, ಇಪು೯ ಫಾಲ್ಸ್ ಅಭಿವೖದ್ದಿಗಾಗಿ ಸಕಾ೯ರದಿಂದ 1 ಕೋಟಿ ರುಪಾಯಿ ಅನುದಾನ ದೊರಕಿದೆ ಎಂದು ಮಾಹಿತಿ ನೀಡಿದರು. ಕೊಡಗಿನಲ್ಲಿ ಹೊಣೆಯರಿತ ಮತ್ತು ನಿಸಗ೯ ಸ್ನೇಹಿ ಪ್ರವಾಸೋದ್ಯಮದ ಪ್ರಚಾರದ ಉದ್ದೇಶದಿಂದ ಹೋಂಸ್ಟೇಗಳು, ಲಾಡ್ಜ್, ರೆಸಾಟ್೯ಗಳು ತಮ್ಮ ಬೋಡ್೯ ಜತೆಯಲ್ಲಿಯೇ ಕೊಡಗಿನಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿದೆ , ಕೊಡಗನ್ನು ತ್ಯಾಜ್ಯ ಮುಕ್ತವಾಗಿರಿಸಿ ಎಂಬಂಥ ಪರಿಸರ ಸಂರಕ್ಷಣೆಯ ಕಳಕಳಿಯ  ಸಂದೇಶಗಳನ್ನು ಅಳವಡಿಸಿದ್ದೇ ಆದಲ್ಲಿ ಅದು ಪ್ರವಾಸಿಗರ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಬಲ್ಲದು ಎಂಬ ಸಲಹೆಯನ್ನೂ ಅನಿತಾ ಭಾಸ್ಕರ್ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಾಹಸ ಕ್ರೀಡಾ ಪ್ರವಾಸೋದ್ಯಮ, ಆರೋಗ್ಯ  ಸ್ಯಾಸ್ಥ್ಯ ಸಂಬಂಧಿತ ಪ್ರವಾಸೋದ್ಯಮ, ಸ್ಥಳೀಯ ಸಂಸ್ಖೖತಿಯನ್ನು ಪರಿಚಯಿಸುವ ಪ್ರವಾಸೋದ್ಯಮಗಳಿಗೆ ಯೋಜನೆ ರೂಪಿಸಲಾಗುತ್ತದೆ ಎಂದೂ ಅವರು ತಿಳಿಸಿದರು. ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್ ಅವರು ಮಡಿಕೇರಿ ನಗರದಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ಪ್ರವಾಸಿ ತಾಣಗಳಿಗೆ ಕರೆದೊಯ್ಯಲು ಸಿಟಿ ರೌಂಡ್ಸ್ ಬಸ್ ಸಂಚಾರ ಅಗತ್ಯವಿದೆ ಎಂದು ಸಲಹೆ ನೀಡಿದರು. ನಿಸಗ೯ಧಾಮ ಸಂಪೂಣ೯ ಕಾಂಕ್ರೀಟ್ ಕಾಡಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಗಮನ ಹರಿಸುವಂತೆ ಚಿದ್ವಿಲಾಸ್ ಮನವಿ ಮಾಡಿದರು. ಕೊಡಗಿನಲ್ಲಿ ಪ್ರವಾಸಿ ಉತ್ಸವ ಆಯೋಜಿಸುವ ಮೂಲಕ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡಬೇಕಾಗಿದೆ. ರಾಜಾಸೀಟ್ ನಲ್ಲಿ ಪುಟಾಣಿ ರೈಲಿನ ಮರುಸಂಚಾರಕ್ಕೆ ಕೂಡ ಪ್ರವಾಸೋದ್ಯಮ ಇಲಾಖೆ ಗಮನ ಹರಿಸುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಯಾವುದೇ ಪ್ರವಾಸೀ ತಾಣಗಳಲ್ಲಿಯೂ ಮೂಲರೂಪವನ್ನು ಕಳೆಗುಂದುವಂತೆ ಮಾಡದೇ ಅಭಿವೖದ್ದಿ ಯೋಜನೆ ಕೈಗೊಳ್ಳುವಂತೆ ಸಂಘದ ನಿದೇ೯ಶಕ ರಂಜಿತ್ ಕವಲಪಾರ ಸಲಹೆ ನೀಡಿದರು. ಸಂಘದ ನಿದೇ೯ಶಕ ಎಸ್.ಜಿ. ಉಮೇಶ್ ಮಾತನಾಡಿ, ರಾಜಾಸೀಟ್ ಮಾಗ೯ದಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡದೇ ಹೋದಲ್ಲಿ ಸ್ಥಳೀಯರು ಪ್ರವಾಸಿಗರ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಹೆಚ್ಚಾಗಿದೆ. ನಗರದಲ್ಲಿ ಬಹುಮಹಡಿ ಸಂಕೀಣ೯ ನಿಮಿ೯ಸಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸವಂತೆ ಸಲಹೆ ನೀಡಿದರು. ಸಂಘದ ನಿದೇ೯ಶಕ ಬಿ.ಜಿ. ಅನಂತಶಯನ ಮಾತನಾಡಿ, ಕಳಪೆ ಗುಣಮಟ್ಟದ ಸಂಬಾರ ಪದಾಥ೯ ಮತ್ತು ಚಾಕೋಲೇಟ್, ವೈನ್ ಗಳ ಮಾರಾಟಕ್ಕೆ ಕಡಿವಾಣ ಹಾಕಲೇಬೇಕು. ಕೊಡಗಿನ ಹೆಸರಿನಲ್ಲಿ ಕಳಪೆ ಗುಣಮಟ್ಟದ ಪದಾಥ೯ಗಳ ಮಾರಾಟದಿಂದಾಗಿ ಕೊಡಗಿನ ಹೆಸರಿಗೆ ಅಪಖ್ಯಾತಿ ಬರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.. ಸಂಘಧ ನಿದೇ೯ಶಕ ಜಿ. ವಿ. ರವಿಕುಮಾರ್, ಊಟಿ, ಕೊಡೈಕೆನಾಲ್ ನಂತೆ ಕೊಡಗಿಗೆ ವಾಹನಗಳ ಸಂಖ್ಯೆಯನ್ನು ನಿಗಧಿಪಡಿಸುವಂತೆ ಸಲಹೆ ಮಾಡಿದರು.  ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಗ್ನೇಷ್ ಭೂತನಕಾಡು, ಜಿಲ್ಲೆಯಲ್ಲಿ ಕೖಷಿ ಸಂಬಂಧಿತ    ಪ್ರವಾಸೋದ್ಯಮಕ್ಕೆ ಪ್ರಚಾರ ನೀಡುವಂತೆ ಸಲಹೆ ನೀಡಿದರು. ಗುಡ್ಡೆಮನೆ ವಿಶುಕುಮಾರ್,  ನವೀನ್, ಅರುಣ್ ಕೂಗ್೯ ಸೇರಿದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಅನೇಕ ಸಲಹೆಗಳನ್ನು ಸಂವಾದದ ಸಂದಭ೯ ನೀಡಿದರು. ಕೊಡಗು ಮದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಹಲವು ವಷ೯ಗಳಿಂದ ನೆನೆಗುದಿಗೆ ಬಿದ್ದಿದ್ದ ಉಪನಿದೇ೯ಶಕರ ಹುದ್ದೆ 13 ತಿಂಗಳ ಹಿಂದೆ ಭತಿ೯ಯಾಗಿ ಅನಿತಾ ಬಾಸ್ಕರ್ ಮೂಲಕ ಓವ೯ ಕ್ರಿಯಾಶೀಲ ಅಧಿಕಾರಿ ಕೊಡಗಿನ ಪ್ರವಾಸೋದ್ಯಮ ಇಲಾಖೆಗೆ ದೊರಕಿದ್ದಾರೆ ಎಂದು ಶ್ಲಾಘಿಸಿದರು. ಸಂಘದ ಪಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ ಸ್ವಾಗತಿಸಿ, ವಂದಿಸಿದರು. ಇದೇ ಸಂದಭ೯ ಕೊಡಗು   ಪತ್ರಕತ೯ರ ಸಂಘ  ವತಿಯಿಂದ ಅನಿತಾ ಭಾಸ್ರ್ ಅವರಿಗೆ ಅಭಿನಂದನಾ ಪತ್ರವನ್ನು ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ನೀಡಿದರು. ಜಿಲ್ಲಾ  ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ  ಜತಿನ್  ಬೋಪಣ್ಣ ಹಾಜರಿದ್ದರು.

ಕೊಡಗಿಗೆ ಇ ಪಾಸ್ ಅಸಾಧ್ಯ :: ಕೊಡಗು ಜಿಲ್ಲೆಗೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರನ್ನು ನಿಯಂತ್ರಿಸಲು ಊಟಿ, ಕೊಡೈಕೆನಾಲ್ ಮಾದರಿಯಲ್ಲಿ ದಿನಕ್ಕೆ ಇಂತಷ್ಟೇ ವಾಹನಗಳಿಗೆ  ಪ್ರವೇಶ ಎಂಬ ಇ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲು ಅನೇಕರು ಸಲಹೆ ನೀಡುತ್ತಿದ್ದಾರೆ. ಆದರೆ ಇದು  ತಾಂತ್ರಿಕವಾಗಿ ಅಸಾಧ್ಯವಾಗಿದೆ. ಕುಶಾಲನಗರ – ಮಡಿಕೇರಿಗಾಗಿ ಮತ್ತು ಕುಟ್ಟ, ಮಾಕುಟ್ಟ ಮಾಗ೯ವಾಗಿ ಹೆದ್ದಾರಿ ಹಾದುಹೋಗುವುದರಿಂದ ಈ ಮಾಗ೯ಗಳಲ್ಲಿ  ನಿತ್ಯ ಪ್ರಯಾಣಿಕರು ಸಾಗುತ್ತಾರೆ. ಹೀಗಾಗಿ ಪಾಸ್ ವ್ಯವಸ್ಥೆ ಕಷ್ಟಸಾಧ್ಯ. ಅಂತೆಯೇ, ಕೊಡಗಿಗೆ ಊಟಿ, ಕೊಡೈಕೆನಾಲ್ ನಂತೆ ಎರಡು ಪ್ರವೇಶ ಮಾತ್ರವಿರದೇ ಹಲವಾರು ಮಾಗ೯ಗಳಿಂದ ಕೊಡಗನ್ನು ಪ್ರವೇಶಿಸಹುದಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಇ ಪಾಸ್ ಜಾರಿಗೊಳಿಸಲಾಗುವುದಿಲ್ಲ.  – ಅನಿತಾ ಭಾಸ್ಕರ್, ಪ್ರವಾಸೋದ್ಯಮ ಇಲಾಖೆಯ ಉಪನಿದೇ೯ಶಕಿ.

ಕನಾ೯ಟಕ ರಾಜ್ಯವು ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರನ್ನು ಆಕಷಿ೯ಸುವ ರಾಜ್ಯಗಳ ಪೈಕಿ 3 ನೇ ಸ್ಥಾನದಲ್ಲಿದೆ. ಆದರೆ ವಿದೇಶಿ ಪ್ರವಾಸಿಗರನ್ನು ಆಕಷಿ೯ಸುವಲ್ಲಿ ಕನಾ೯ಟಕ ಹಿಂದುಳಿದಿದ್ದು ವಾಷಿ೯ಕ 4 ಲಕ್ಷ ವಿದೇಶಿ ಪ್ರವಾಸಿಗರು ಮಾತ್ರ ಭೇಟಿ ನೀಡುತ್ತಿದ್ದಾರೆ. ಕಡಲಕಿನಾರೆ, ಪಶ್ಚಿಮಘಟ್ಟಶ್ರೇಣಿ, ಸ್ಥಳೀಯ ಸಂಸ್ಖತಿ ಮುಂತಾದುವುಗಳಿಂದಾಗಿ ಕನಾ೯ಟಕ ರಾಜ್ಯವು ದೇಶದಲ್ಲಿಯೇ ಮನಮೋಹಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅನಿತಾ ಭಾಸ್ಕರ್ ಹೆಮ್ಮೆ ವ್ಯಕ್ತಪಡಿಸಿದರು.

ಸಾರ್ವಜನಿಕ ಸಹಭಾಗಿತ್ವದ(ಪಿಪಿಪಿ) ಕಾರ್ಯಕ್ರಮ : ಪ್ರವಾಸಿ ತಾಣಗಳ ಅಭಿವೃದ್ಧಿಯೊಂದಿಗೆ, ಪ್ರವಾಸಿ ಕೇಂದ್ರಗಳ ಬಳಿಯಲ್ಲಿ ಜಾಗವನ್ನು ಹೊಂದಿರುವವರ ಜತೆ   ಒಪ್ಪಂದಗಳನು ಮಾಡಿಕೊಳ್ಳುವ ಮೂಲಕ ಅಲ್ಲಿ ಪ್ರವಾಸಿಗರಿಗೆ ಪೂರಕವಾದ ಉದ್ಯಾನವನ, ಶೌಚಾಲಯ ನಿರ್ಮಾಣದಂತಹ ಮೂಲ ಸೌಲಭ್ಯ ಒದಗಿಸುವುದು  ಪ್ರವಾಸೋದ್ಯಮ ಇಲಾಖೆಯ ಉದ್ದೇಶವಾಗಿದೆ. ಆ ಮೂಲಕ ಸಮುದಾಯವನ್ನು ಪ್ರವಾಸೋದ್ಯಮದೊಮದಿಗೆ ಬೆಸೆದು ಪ್ರವಾಸೋದ್ಯಮದಲ್ಲಿ ಅಭವೃದ್ಧಿಯನ್ನು ಕಾಣುವುದು ಪ್ರವಾಸೋದ್ಯಮ ಕಾರ್ಯಯೋಜನೆಯ ಭಾಗವಾಗಿದೆಯೆಂದು ಅನಿತಾ ಭಾಸ್ಕರ್ ನುಡಿದರು.

 1.62 ಕೋಟಿ ವೆಚ್ಚದಲ್ಲಿ ಮಂದ್‌ಲ್ ಪಟ್ಟಿ ಜಂಕ್ಷನ್ ಅಭಿವೃದ್ಧಿ ::  ಕೊಡಗಿನ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣ ‘ಮಂದ್‌ಲ್ ಪಟ್ಟಿ’ ಅರಣ್ಯ ಇಲಾಖಾ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದು, ಅಲ್ಲಿಗೆ ತೆರಳುವ ಜಂಕ್ಷನ್ ಬಳಿ ಪ್ರವಾಸೋದ್ಯಮಕ್ಕೆ ಪೂರಕವಾಗಿ 1.62 ಕೋಟಿ ವೆಚ್ಚದ ಅಭಿವೃದ್ಧಿಯ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಕ್ಷೇತ್ರದ ಶಾಸಕರಾದ ಡಾ.ಮಂಥರ್ ಗೌಡ ಅವರ  ಸಹಕಾರದೊಂದಿಗೆ ರಸ್ತೆಗಳ ಅಭಿವೃದ್ಧಿಗೂ ಪ್ರಯತ್ನಗಳು ನಡೆಯುತ್ತಿದೆೆಯೆಂದು ಹೇಳಿದರು. ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯ ಪ್ರಯತ್ನಗಳ ನಡುವೆಯೇ ಹೊನ್ನಮ್ಮನ ಕೆರೆಯಲ್ಲಿ ಜಲ ಕ್ರೀಡೆಗಳ ಆಯೋಜನೆ, ಪೊನ್ನಂಪೇಟೆಯಲ್ಲಿ ‘ಕಯಾಕಿಂಗ್’ ಮೊದಲಾದ ಸಾಹಸ ಕ್ರೀಡೆಗಳನ್ನು ಪ್ರವಾಸಿಗರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಮಡು ಕಾರ್ಯರೂಪಕ್ಕೆ ತರುವ ಉದ್ದೇಶವಿರುವುದಾಗಿ ತಿಳಿಸಿದರು.

‘ಸ್ವಾಸ್ಥ್ಯ’ದತ್ತ ಚಿಂತನೆ ಹರಿಸಿ ::  ಜಿಲ್ಲೆಯಲ್ಲಿ ಪ್ರವಾಸಿಗರಿಗಾಗಿ ಇರುವ ಹೋಂ ಸ್ಟೇ , ರೆಸಾರ್ಟ್ಗಳಲ್ಲಿ ಆರೋಗ್ಯ ಸಂರಕ್ಷಣೆಗೆ ಸಂಬಂಧಿಸಿದ ‘ಸ್ವಾಸ್ಥ್ಯ’ಕ್ಕೆ ಒಂದಷ್ಟು ಜಾಗವನ್ನು ಕಲ್ಪಿಸಬೇಕು. ಇದರಿಂದ ಹೋಂಸ್ಟೇಗಳಲ್ಲಿ ತಂಗುವವರು ಮತ್ತೆ ಕೆಲ ದಿನಗಳ ಕಾಲ ಅಲ್ಲಿ ತಂಗುವ ಅವಕಾಶ ಸೃಷ್ಟಿಯಾಗುತ್ತದೆ. ಇಂತಹ ಚಟುವಟಿಕೆಗಳಿಗೆ ತಪ್ಪಾಗಿ ಅರ್ಥೈಸುವ ಕಾರ್ಯವಾಗುವುದು ಬೇಡವೆಂದು ಸೂಕ್ಷ್ಮವಾಗಿ ನುಡಿದರು.

‘ಸ್ವಚ್ಛ ಕೊಡಗು’ ಅರಿವು ಮೂಡಿಸಿ ::  ಕೊಡಗಿನ ಬಹಳಷ್ಟು ಹೋಂ ಸ್ಟೇಗಳ ಹೆಸರು ಅತ್ಯಾಕರ್ಷಕವಾಗಿ ಗಮನ ಸೆಳೆಯುತ್ತದೆ. ಇಂತಹ ಹೆಸರಿನೊದಿಗೆ ‘ಕೊಡಗನ್ನು ಸ್ವಚ್ಛವಾಗಿರಿಸಿಕೊಳ್ಳಿ’, ‘ಪ್ಲಾಸ್ಟಿಕ್ ಬಳಕೆ ಬೇಡ’ ಎನ್ನುವ ಪ್ರವಾಸಿಗರನ್ನು ಜಾಗೃತ ಗೊಳಿಸುವ ಪ್ರಯತ್ನಗಳನ್ನು ಮಾಡುವಂತೆ ಅನಿತಾ ಭಾಸ್ಕರ್ ಮನವಿ ಮಾಡಿದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಾ.31ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 120ನೇ ಜನ್ಮ ದಿನಾಚರಣೆ*

ಮಾರ್ಚ್ 28, 2026

*ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*

ಮಾರ್ಚ್ 28, 2026

*ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಮಾರ್ಚ್ 28, 2026

*ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ ಆಯ್ಕೆ*

ಮಾರ್ಚ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮಾ.28 NEWS DESK : ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್ (ಕೋಕಾ), ಪ್ರಧಾನ ಕಾರ್ಯದರ್ಶಿಯಾಗಿ ಬಿ.ಜಿ.ರಮೇಶ್ ನಾಕೂರು ಅವರನ್ನು…

*ಶ್ರೀ ತಿರುನೆಲ್ಲಿ ಪೆಮ್ಮಯ್ಯ ದೇವಾಲಯಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಮಾರ್ಚ್ 28, 2026

*ಸೋಮವಾರಪೇಟೆಯಲ್ಲಿ ಸಂಭ್ರಮದ ರಾಮೋತ್ಸವ*

ಮಾರ್ಚ್ 28, 2026

*ಮೂರ್ನಾಡು : ಮಾ.29 ರಂದು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮಾರ್ಚ್ 28, 2026

*ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿ*

ಮಾರ್ಚ್ 28, 2026

*ಕೂಡಿಗೆ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವೃತ್ತಿ ಮೇಳ ಸಹಕಾರಿ : ಸಿಇಓ ಆನಂದ್ ಪ್ರಕಾಶ್ ಮೀನ*

ಮಾರ್ಚ್ 28, 2026

*ಕೊಡಗು ವಿಶ್ವವಿದ್ಯಾಲಯದ ಮೂರನೇ ಸಂಸ್ಥಾಪನಾ ದಿನಾಚರಣೆ : ಭಾರತದ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಅಗತ್ಯ : ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅಭಿಮತ*

ಮಾರ್ಚ್ 28, 2026

*ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ : ಗಮನಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ*

ಮಾರ್ಚ್ 28, 2026

*ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ಮಿಲನ ಕೆ.ಭರತ್‍ಗೆ ಬೆಳ್ಳಿ ಪದಕ*

ಮಾರ್ಚ್ 28, 2026

*ಕೊಡಗಿನಲ್ಲಿ ರಂಗ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಅಗತ್ಯ ವ್ಯವಸ್ಥೆ ಕಲ್ಪಿಸಿ : ಅಲ್ಲಾರಂಡ ವಿಠಲ ಮನವಿ*

ಮಾರ್ಚ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.