





ಮೈದಾನ 1 :: ಮುಕ್ಕಾಟಿರ (ಬೇತ್ರಿ) ಮತ್ತು ಚೌರೀರ ತಂಡಗಳ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಚೌರೀರ ತಂಡ ಜಯ ಸಾಧಿಸಿತು.
ಚೌರೀರ ತಂಡದ ಪರ ಪ್ರತಾಪ್ ಅಚ್ಚಯ್ಯ ಹ್ಯಾಟ್ರೀಕ್ ಗೋಲು ದಾಖಲಿಸಿದದರೆ, ಪೆಮ್ಮಯ್ಯ 1 ಗೋಲು ಬಾರಿಸಿದರು. ಮುಕ್ಕಾಟಿರ ಉತ್ತಮ್ ಬೋಪಣ್ಣ 1 ಗೋಲು ದಾಖಲಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಶಿವಾಚಾಳಿಯಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ದಾಖಲಿಸುವ ಮೂಲಕ ಡ್ರಾ ಆದ ಕಾರಣ ಟೈ ಬ್ರೇಕರ್‍ನಲ್ಲಿ ಚೆರಿಯಪಂಡ ತಂಡ 3 ಗೋಲು ದಾಖಲಿಸಿ ಗೆಲುವಿನ ನಗೆ ಬೀರಿತು. ಚೆರಿಯಪಂಡ ತಂಡದ ಪರ ದೀಪಕ್ ಸೋಮಯ್ಯ 1, ಟೈ ಬ್ರೇಕರ್‍ನಲ್ಲಿ ಜಾಲಿ ಪೊನ್ನಣ್ಣ, ಗಗನ್ ನಂಜಪ್ಪ ಹಾಗೂ ದೀಪಕ್ ಸೋಮಯ್ಯ ತಲಾ 1 ಗೋಲು ದಾಖಲಿಸಿದರು. ಶಿವಾಚಾಳಿಯಂಡ ಪರ ವಿಜು ಪೂಣಚ್ಚ 1 ಗೋಲು ಬಾರಿಸಿದರು. ಶಿವಾಚಾಳಿಯಂಡ ಯಶವಂತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೂಕಳಮಾಡ ಮತ್ತು ಅಜ್ಜಿಕುಟ್ಟೀರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳಮಾಡ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮೂಕಳಮಾಡ ತಂಡದ ಪರ ಬೋಪಣ್ಣ ಹಾಗೂ ಗಣಪತಿ ತಲಾ 1 ಗೋಲು ದಾಖಲಿಸಿದರು. ಅಜ್ಜಿಕುಟ್ಟೀರ ರೋಮಲ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಾಲಂದಿರ ಮತ್ತು ಐನಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪಾಲಂದಿರ ತಂಡ ಜಯ ಸಾಧಿಸಿತು. ಪಾಲಂದಿರ ತಂಡದ ಪರ ಪುಟಿನ್ ಅಯ್ಯಪ್ಪ 2, ಅಪ್ಪಚ್ಚು, ಭೀಮಯ್ಯ ಹಾಗೂ ಚಂಗಪ್ಪ ತಲಾ 1 ಗೋಲು ದಾಖಲಿಸಿದರು. ಐನಂಡ ಬೋಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುಕ್ಕಾಟಿರ (ಕುಂಜಿಲಗೇರಿ) ಮತ್ತು ಮಚ್ಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 2 ಗೋಲು ದಾಖಲಿಸಿ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್ ನಲ್ಲಿ ಮಚ್ಚಂಡ ತಂಡ 4 ಗೋಲು ಬಾರಿಸಿ ಗೆಲುವು ದಾಖಲಿಸಿತು. ಮಚ್ಚಂಡ ತಂಡದ ಪರ ನೀಲ್ ಬೆಳ್ಯಪ್ಪ ಹಾಗೂ ಶಂಬು ಅಯ್ಯಪ್ಪ ಟೈ ಬ್ರೇಕರ್‍ನಲ್ಲಿ ಸಜನ್, ಮಂಜು ಚಂಗಪ್ಪ, ಅಜಿತ್ ಮುತ್ತಪ್ಪ ಹಾಗೂ ಶಂಬು ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಮುಕ್ಕಾಟಿರ ಪರ ಪ್ರತಿಕ್ 2, ಟೈ ಬ್ರೇಕರ್ ನಲ್ಲಿ ಹರ್ಷ ಹಾಗೂ ವೇದಂತ್ ತಲಾ 1 ಗೋಲು ದಾಖಲಿಸಿದರು. ಮುಕ್ಕಾಟಿರ ಪ್ರತಿಕ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಲ್ಲಂಗಡ ಮತ್ತು ಸಿದ್ದಂಡ ನಡುವಿನ ಪಂದ್ಯವನ್ನು ಮಳೆಯ ಕಾರಣದಿಂದ ಪಂದ್ಯವನ್ನು ಮುಂದೂಡಲಾಯಿತು.
ಮೈದಾನ 2 :: ನಾಳಿಯಂಡ ಮತ್ತು ಕೊಕ್ಕಲೆರ ವಾಕ್ ಓವರ್‍ನಲ್ಲಿ ನಾಳಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ತಾತಂಡ ಮತ್ತು ಕುಯಿಮಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ತಾತಂಡ ತಂಡ ಗೆಲುವು ಸಾಧಿಸಿದ್ದು, ತಾತಂಡ ತಂಡದ ಬೋಪಣ್ಣ 3 ಹಾಗೂ ನೇತ್ರ ಸೋಮಯ್ಯ 2 ಗೋಲು ದಾಖಲಿಸಿದರು. ಕುಯಿಮಂಡ ಹವೀಶ್ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಕೊಕ್ಕಲೆಮಾಡ ಮತ್ತು ಕಾಳೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಳೆಯಂಡ ತಂಡ ಗೆಲುವು ಸಾಧಿಸಿತು. ಕಾಳೆಯಂಡ ತಂಡದ ಸಾಬ ತಿಮ್ಮಯ್ಯ 1 ಗೋಲು ದಾಖಲಿಸಿದರು. ಕೊಕ್ಕಲೆಮಾಡ ತಾಜ್ ಕುಶಾಲಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನಾಯಕಂಡ ಮತ್ತು ಕಳ್ಳಿಚಂಡ ನಡುವಿನ ಪಂದ್ಯದಲ್ಲಿ ಕಳ್ಳಿಚಂಡ ತಂಡ 4-0 ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಕಳ್ಳಿಚಂಡ ಪರ ಕಾವೇರಪ್ಪ 2, ಸವನ್ ಹಾಗೂ ಕುಶಾಲಪ್ಪ ತಲಾ 1 ಗೋಲು ದಾಖಲಿಸಿದರು. ನಾಯಕಂಡ ಇಶ ಮುತ್ತಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನಡಿಕೇರಿಯಂಡ ಮತ್ತು ಪಂದ್ಯಂಡ ತಂಡಗಳ ನಡುವಿನ ವಕ್ ಓವರ್‍ನಲ್ಲಿ ನಡಿಕೇರಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಕಾಳಿಮಾಡ ಮತ್ತು ನಂಬುಡುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕಾಳಿಮಾಡ ಪರ ಶಾಸತ್ ಮುತ್ತಪ್ಪ 2 ಹಾಗೂ ಆಯುಷ್ ಬೋಪಯ್ಯ 1 ಗೋಲು ದಾಖಲಿಸಿತು. ನಂಬುಡುಮಾಡ ಲಿತಿನ್ ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಟ್ಟುಕತ್ತಿರ ಮತ್ತು ಕಳಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗಧಿತ ಅವದಿಯಲ್ಲಿ ಶೂನ್ಯ ಸಾಧನೆ ಮಾಡಿದ ಕಾರಣ ಟೈಬ್ರೇಕರ್‍ನಲ್ಲಿ 5 ಗೋಲು ದಾಖಲಿಸಿದ ಕಳಕಂಡ ತಂಡ ಜಯ ದಾಕಲಿಸಿತು. ಕೊಟ್ಟುಕತ್ತಿರ ತಂಡದ ಪರ ಟೈ ಬ್ರೇಕರ್‍ನಲ್ಲಿ 4 ಗೋಲು ಬಾರಿಸಲಾಯಿತು. ಕೊಟ್ಟುಕತ್ತಿರ ದೀರ್ಘ (ದಿವ್ಯ) ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ 3 : ತಿರೋಡಿರ ಮತ್ತು ತಿರುಟೆರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ತಿರುಟೆರ ಗೆಲುವು ಸಾಧಿಸಿತು. ತಿರುಟೆರ ತಂಡದ ಪರ ವಿನು ಸೋಮಯ್ಯ 2, ಗೌತಮ್ ಗಣಪತಿ ಹಾಗೂ ಪ್ರೀತಮ್ ತಲಾ 1 ಗೋಲು ದಾಖಲಿಸಿದರು. ತಿರೋಡಿರ ನಿರೂಪ್ ನಾಣಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಕೇತಿರ ಮತ್ತು ಕೊಚ್ಚೆರ ನಡುವಿನ ಪಂದ್ಯದಲ್ಲಿ ಕೊಚ್ಚೆರ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಕೊಚ್ಚೆರ ತಂಡದ ಭರತ್ ಹಾಗೂ ಬಿಪಿನ್ ಪಳಂಗಪ್ಪ ತಲಾ 1 ಗೋಲು ದಾಖಲಿಸಿದರು. ಕೇತಿರ ತಂಡದ ಪರ ಸೌಮ್ಯ ಕಾವೇರಪ್ಪ 1 ಗೋಲು ಬಾರಿಸಿದರು. ಕೇತಿರ ಕಾಶಿ ಕಾವೇಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಳ್ಳಂಗಡ ಮತ್ತು ನಾಮೆರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಳ್ಳಂಗಡ ತಂಡ ಗೆಲುವು ದಾಖಲಿಸಿತು. ಕಳ್ಳಂಗಡ ತಂಡದ ಪರ ಗಣಪತಿ ಗೋಲು ದಾಖಲಿಸಿದರು. ನಾಮೆರ ತಂಡದ ನಿಶಾನ್ ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಟ್ಟಂಡ ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ ತೀತರಮಾಡ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ತೀತರಮಾಡ ಪರ ತನುಷ್, ಚರಣ್ ಹಾಗೂ ಆಕಾಶ್ ತಲಾ 1 ಗೋಲು ದಾಖಲಿಸಿದರು. ಚಟ್ಟಂಡ ಪರ ಬೋಪಣ್ಣ ಹಾಗೂ ಯತೀನ್ ಬೋಪಯ್ಯ ತಲಾ 1 ಗೋಲು ಬಾರಿಸಿದರು. ಚಟ್ಟಂಡ ಯತೀನ್ ಬೋಪಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು. ಚೊಟ್ಟೆಯಂಡಮಾಡ ಮತ್ತು ಉಡುವೆರ ತಂಡಗಳ ನಡುವೆ ವಾಕ್ ಓವರ್‍ನಲ್ಲಿ ಚೊಟ್ಟೆಯಂಡಮಾಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಬಲ್ಲಾರಂಡ ಮತ್ತು ಕಾಳೇಂಗಡ ತಂಡದ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಳೇಂಗಡ ತಂಡ ಜಯ ಸಾಧಿಸಿತು. ಕಾಳೇಂಗಡ ಬೋಪಣ್ಣ 1 ಗೋಲು ದಾಖಲಿಸಿದರು. ಬಲ್ಲಾರಂಡ ಕರುಂಬಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.