





*ಮೈದಾನ 1*
ಮೊಳ್ಳೇರ ಮತ್ತು ಅಪ್ಪನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ 4-3 ಗೋಲುಗಳ ಅಂತರದಲ್ಲಿ ಅಪ್ಪನೆರವಂಡ ತಂಡ ಜಯ ದಾಖಲಿಸಿತು. ಅಪ್ಪನೆರವಂಡ ಪರ ಯಶ್ವಿನ್ ನಾಚಪ್ಪ 2, ತರುಣ್ ಮಾಚಯ್ಯ ಹಾಗೂ ಚುಮ್ಮಿದೇವಯ್ಯ ತಲಾ 1 ಗೋಲು ದಾಖಲಿಸಿದರು. ಮೊಳ್ಳೇರ ತಂಡದ ಪರ ಶಿವ ಸೋಮಯ್ಯ, ಹರ್ಷ ಅಪ್ಪಣ್ಣ, ಹಾಗೂ ನಿಖಿಲ್ ದೇವಯ್ಯ ತಲಾ 1 ಗೋಲು ಬಾರಿಸಿದರು. ಅಪ್ಪನೆರವಂಡ ಶಿವ ಸೋಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಾಂಡಂಡ ಮತ್ತು ಕುಮ್ಮಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ಗಳಿಸುವ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್ ನಲ್ಲಿ 4-2 ಗೋಲುಗಳ ಅಂತರದಲ್ಲಿ ಕುಮ್ಮಂಡ ತಂಡ ಗೆಲುವು ದಾಖಲಿಸಿತು. ಕರಲ್ ಕಾರ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ತಂಬುಕುತ್ತೀರ ಮತ್ತು ಕಳ್ಳಂಗಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ತಂಬುಕುತ್ತೀರ ಜಯ ಸಾಧಿಸಿತು. ತಂಬುಕುತ್ತೀರ ಪರ ನಾಣಯ್ಯ 1 ಗೋಲು ಬಾರಿಸಿದರು. ಕಳ್ಳಂಗಡ ಸೂರಜ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಲ್ಲಂಗಡ ಮತ್ತು ಸಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮಲ್ಲಂಗಡ ತಂಡ ಜಯ ಸಾಧಿಸಿತು. ಮಲ್ಲಂಗಡ ಪರ ಕಾರ್ತಿಕ್, ನೀಲ್ ಗಣಪತಿ ಹಾಗೂ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಸಿದ್ದಂಡ ನಿತೀನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೊಣ್ಣಂಡ ಮತ್ತು ಚೀರಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗದಿತ ಸಮಯದಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಟೈ ಬ್ರೇಕರ್‍ನಲ್ಲಿ 4-3 ಗೋಲುಗಳ ಅಂತರದಲ್ಲಿ ಚೀರಂಡ ತಂಡ ಗೆಲುವು ದಾಖಲಿಸಿತು. ಮೊಣ್ಣಂಡ ವಚನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೈಪಟ್ಟಿರ ಮತ್ತು ಬೈರಾಜಂಡ ನಡುವಿನ ಪಂದ್ಯದಲ್ಲಿ ಕೈಪಟ್ಟಿರ ತಂಡ 3-0 ಗೋಲುಗಳ ಅಂತದಲ್ಲಿ ಜಯ ಸಾಧಿಸಿತು. ಕೈಪಟ್ಟಿರ ಪರ ಬೋಪಣ್ಣ 2 ಹಾಗೂ ಮೇದಪ್ಪ 1 ಗೋಲು ದಾಖಲಿಸಿದರು. ಬೈರಾಜಂಡ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅರಮಣಮಾಡ ಮತ್ತು ಮೇವಡ ನಡುವಿನ ಪಂದ್ಯದಲ್ಲಿ ಮೇವಡ ತಂಡ 1-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮೇವಡ ಪರ ಜಶಂತ್ ತಮ್ಮಯ್ಯ 1 ಗೋಲು ದಾಖಲಿಸಿದರು. ಅರಮಣಮಾಡ ನಮನ್ ಬೆಳ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2*
ಚೆಯ್ಯಂಡ ಮತ್ತು ಕೇಲೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕೇಲೇಟಿರ ತಂಡ 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೇಲೇಟಿರ ಪರ ಮುತ್ತಣ್ಣ 2 ಹಾಗೂ ನಿಖಿಲ್ 1 ಗೋಲು ದಾಖಲಿಸಿದರು. ಚೆಯ್ಯಂಡ ಪರ ಶ್ರೇಯಸ್ ಪೂವಣ್ಣ ಹಾಗೂ ಶಂಕರಿ ತಲಾ 1 ಗೋಲು ದಾಖಲಿಸಿದರು. ಚೆಯ್ಯಂಡ ಶ್ರೇಯಸ್ ಪೂವಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಆದೇಂಗಡ ಮತ್ತು ಪುಗ್ಗೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಆದೇಂಗಡ ತಂಡ ಗೆಲುವು ಸಾಧಿಸಿತು. ಆದೇಂಗಡ ಪರ ಶಾನ್ ದೇವಯ್ಯ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಕುಶಾಲಪ್ಪ 1 ಗೋಲು ಬಾರಿಸಿದರು. ಪುಗ್ಗೇರ ಮುತ್ತಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪುಚ್ಚಿಮಾಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ನಾಪಂಡ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ನಾಪಂಡ ಪರ ನಿತೀನ್ ನಾಚಪ್ಪ 2 ಹಾಗೂ ಪ್ರವೀಣ್ 1 ಗೋಲು ದಾಖಲಿಸಿದರು. ಪುಚ್ಚಿಮಾಡ ಪರ ಯಶ್ವಿನ್ ಗಣಪತಿ ಹಾಗೂ ಪವನ್ ಬೋಪಣ್ಣ ತಲಾ 1 ಗೋಲು ಬಾರಿಸಿದರು. ಪುಚ್ಚಿಮಾಡ ಯಶ್ವಿನ್ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಟೇರ ಮತ್ತು ಕಾಳೆಂಗಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೊಟೇರ ತಂಡ ಜಯ ಸಾಧಿಸಿತು. ಕೊಟೇರ ತಂಡದ ಪರ ಕವನ್ 1 ಗೋಲು ಬಾರಿಸಿದರು. ಕಾಳೆಂಗಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಂಗಂಡ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕುಪ್ಪಂಡ (ನಾಂಗಾಲ) ಜಯ ಸಾಧಿಸಿತು. ಕುಪ್ಪಂಡ ಪರ ಚಂಗಪ್ಪ 1 ಗೋಲು ದಾಖಲಿಸಿದರು. ಕಂಗಂಡ ಪುನೀತ್ ಮುತ್ತಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆಟ್ಟಿಯಾರಂಡ ಮತ್ತು ಶಾಂತೆಯಂಡ ನಡುವಿನ ಪಂದ್ಯದಲ್ಲಿ 5-1 ಗೋಲುಗಳ ಅಂತರದಲ್ಲಿ ಶಾಂತೆಯಂಡ ತಂಡ ಗೆಲುವು ದಾಖಲಿಸಿತು. ಶಾಂತೆಯಂಡ ಪರ ತನುಶ್ ಕುಟ್ಟಯ್ಯ ಹ್ಯಾಟ್ರಿಕ್ ಗೋಲು ಬಾರಿಸಿದರೆ, ತಿಮ್ಮಯ್ಯ ಹಾಗೂ ವಿಕಾಸ್ ಅಚ್ಚಯ್ಯ ತಲಾ 1 ಗೋಲು ದಾಖಲಿಸಿದರು. ಚೆಟ್ಟಿಯಾರಂಡ ಪರ ದಿಲನ್ ತಿಮ್ಮಯ್ಯ 1 ಗೋಲು ಬಾರಿಸಿದರು. ಚೆಟ್ಟಿಯಂಡ ಅಕ್ಷಯ್ ಅಪ್ಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಚ್ಚಪಂಡ ಮತ್ತು ಮರ್ಚಂಡ ನಡುವಿನ ಪಂದ್ಯದಲ್ಲಿ ಮರ್ಚಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಮರ್ಚಂಡ ಪರ ಪಳಂಗಪ್ಪ 1 ಗೋಲು ದಾಖಲಿಸಿದರು. ಅಚ್ಚಪಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 3*
ಉದ್ದಿನಾಡಂಡ ಮತ್ತು ಕಲಿಯಂಡ ತಂಡಗಳ ನಡುವಿನ ನಡುವೆ ನಡೆದ ಪಂದ್ಯದಲ್ಲಿ ಕಲಿಯಂಡ ತಂಡ 7-0 ಅಂತರದಲ್ಲಿ ಜಯಬೇರಿ ಬಾರಿಸಿತು. ಕಲಿಯಂಡ ತಂಡದ ಪರ ದೇಶ್ ಮುತ್ತಣ್ಣ ಹಾಗೂ ಕಿರಣ್ ತಲಾ 2 ಗೋಲು, ದಿವಿನ್, ಮಾಚಯ್ಯ, ಚಂಗಪ್ಪ ತಲಾ 1 ಗೋಲು ದಾಖಲಿಸಿದರು. ಉದ್ದಿನಾಡಂಡ ವಿಪುಲ್ ಉತ್ತಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕರಿನೆರವಂಡ ಮತ್ತು ಕನ್ನಿಕಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕರಿನೆರವಂಡ ಜಯ ಸಾಧಿಸಿತು. ಕರಿನೆವಂಡ ಪರ ಸಚಿನ್ ಸೋಮಣ್ಣ, ವಸಂತ್ ಪೊನ್ನಪ್ಪ ಹಾಗೂ ಲಿತೇಶ್ ಬಿದ್ದಪ್ಪ ತಲಾ 1 ಗೋಲು ದಾಖಲಿಸಿದರು. ಕನ್ನಿಕಂಡ ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಯವಂಡ ಮತ್ತು ಕೊಣಿಯಂಡ ನಡುವಿನ ಪಂದ್ಯದಲ್ಲಿ ಬಯವಂಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಬಯವಂಡ ಪರ ದೀಪಕ್ 2 ಗೋಲು ಬಾರಿಸಿದರು. ಕೊಣಿಯಂಡ ಪರ ಸೋಮಣ್ಣ 1 ಗೋಲು ಬಾರಿಸಿದರು. ಕೊಣಿಯಂಡ ಕುಟ್ಟಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುಕ್ಕಾಟಿರ (ಹರಿಹರ) ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ನಡುವಿನ ಪಂದ್ಯದಲ್ಲಿ ಮುಕ್ಕಾಟಿರ (ಹರಿಹರ) 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಮುಕ್ಕಾಟಿರ (ಹರಿಹರ) ಪರ ಸೌರವ್ 1 ಗೋಲು ದಾಖಲಿಸಿದರು. ಮುಕ್ಕಾಟಿರ (ದೊಡ್ಡಪುಲಿಕೋಟು) ಹೇಮಂತ್ ಚೆಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಣವಟ್ಟಿರ ಮತ್ತು ಕಳ್ಳಿಚಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತದಲ್ಲಿ ಕಳ್ಳಿಚಂಡ ಜಯ ಸಾಧಿಸಿತು. ಕಳ್ಳಿಚಂಡ ಪರ ಸವನ್ ಹಾಗೂ ಉತ್ತಪ್ಪ ತಲಾ 1 ಗೋಲು ದಾಖಲಿಸಿದರು. ಮಣವಟ್ಟಿರ ಜೀವಿತ್ ಬೆಳ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಳ್ಳಿರ ಮತ್ತು ಕರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಕರವಂಡ ತಂಡ 6-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕರವಂಡ ಪರ ಕೌಶಿಕ್ ಪೂಣಚ್ಚ 2, ಕಿಶನ್ ಸೋಮಯ್ಯ, ದರ್ಶನ್ ದೇವಯ್ಯ, ಅಪ್ಪಚ್ಚು ಹಾಗೂ ಕವನ್ ಪೂವಯ್ಯ ತಲಾ 1 ಗೋಲು ದಾಖಲಿಸಿದರು. ಕಳ್ಳಿರ ಪ್ರತಿಕ್ ಕಾವೇರಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.