





ಮಡಿಕೇರಿ NEWS DESK ಏ.7 : ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ B.Sc ಸೂಕ್ಷ್ಮಾಣು ಜೀವಶಾಸ್ತ್ರದ ಅಂತಿಮ ಪದವಿ ಪರೀಕ್ಷೆಯಲ್ಲಿ ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿನಿ ಮೋನಿಶಾ ರೈ ಸಿ.ಎಸ್ ರಾಜ್ಯಕ್ಕೆ ಮೊದಲ ರ‍್ಯಾಂಕ್ ಗಳಿಸಿ ಕಾರ್ಮೈನ್ ಲೋಬೋ ಚಿನ್ನದ ಪದಕ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮೋನಿಶಾ ರೈ ಪದಕ ಪ್ರದಾನ ಮಾಡಲಾಯಿತು. ಮೋನಿಶಾ ರೈ ಸಿ.ಎಸ್ ಕುಶಾಲನಗರ ತಾಲ್ಲೂಕಿನ ಹಾರಂಗಿ ಸಮೀಪದ ಚಿಕ್ಕತ್ತೂರು ಗ್ರಾಮದ ಬೈಲಾಡಿ ಕುಟುಂಬದ ಶಿವಾನಂದ ರೈ ಹಾಗೂ ಗುಣವತಿ ರೈ ದಂಪತಿಯ ಪ್ರಥಮ ಪುತ್ರಿ. ಫೀ.ಮಾ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಹಾಗೂ ಭೋದಕ, ಭೋದಕೇತರ ವರ್ಗ ಮೋನಿಶಾಗೆ ಅಭಿನಂದನೆ ಸಲ್ಲಿಸಿದ್ದಾರೆ.