







*ಮೈದಾನ 1*
ಮಲಚೀರ ಮತ್ತು ಬೊಟ್ಟೋಳಂಡ ನಡುವೆ ನಡೆದ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ಸಾಧಿಸಿತು. ಬೊಟ್ಟೋಳಂಡ ಪರ ಸೂರಜ್ ಅಯ್ಯಪ್ಪ ಹಾಗೂ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಮಲಚೀರ ಪರ ಹರ್ಷ 1 ಗೋಲು ಬಾರಿಸಿದರು. ಮಲಚೀರ ಶಾನ್ ಬೋಪಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕನ್ನಂಡ ಮತ್ತು ಚೊಟ್ಟೆರ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಕನ್ನಂಡ ತಂಡ ಜಯ ಸಾಧಿಸಿತು. ಕನ್ನಂಡ ಪರ ಶರಣ್ ಹಾಗೂ ರೋಹನ್ ಅಯ್ಯಪ್ಪ ತಲಾ 2 ಗೋಲು ದಾಖಲಿಸಿದರು. ಚೊಟ್ಟೆರ ಪರ ಕವನ್ 1 ಗೋಲು ಬಾರಿಸಿದರು. ಚೊಟ್ಟೆರ ಬಿಪಿನ್ ಬೆಳ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೋಡಿರ ಮತ್ತು ಪಾಲೆಕಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೋಡಿರ ತಂಡ ಗೆಲುವು ದಾಖಲಿಸಿತು. ಕೋಡಿರ ಪರ ದೀಕ್ಷಿತ್ ಅಪ್ಪಚ್ಚು 1 ಗೋಲು ದಾಖಲಿಸಿದರು. ಪಾಲೆಕಂಡ ಸೋಮಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬಡುವಮಂಡ ಮತ್ತು ಪಳಂಗೇಟಿರ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬಡುವಮಂಡ ಜಯ ಸಾಧಿಸಿತು. ಬಡುವಮಂಡ ಪರ ಎಲ್ಲಾ 5 ಗೋಲುಗಳನ್ನು ಭರ್ಜರಿಯಾಗಿ ಭಾರಿಸಿ ಗೌತಮ್ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಪಳಂಗೇಟಿರ ಅಜಿತ್ ಪೆಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ನೆಲ್ಲಮಕ್ಕಡ ಮತ್ತು ಕೋಳುಮಾಡಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಜಯ ಸಾಧಿಸಿತು. ನೆಲ್ಲಮಕ್ಕಡ ಪರ ಮ್ಯಾಕ್ ಮೊಣ್ಣಪ್ಪ 2, ಪ್ರಧಾನ್ ಚಂಗಪ್ಪ ಹಾಗೂ ಪ್ರತಿಕ್ ಪೂವಣ್ಣ ತಲಾ 1 ಗೋಲು ದಾಖಲಿಸಿದರು. ಕೋಳುಮಾಡಂಡ ವಿಶ್ವ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುಕ್ಕಾಟಿರ (ಕಡಗದಾಳು) ಮತ್ತು ಚಂದುರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು. ಮುಕ್ಕಾಟಿರ ಪರ ನಾಣಯ್ಯ ಗೋಲು ದಾಖಲಿಸಿದರು. ಚಂದುರ ಪೊನ್ನಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
——————————————–
*ಮೈದಾನ 2*
ಬಿದ್ದಾಟಂಡ ಮತ್ತು ಪಾಲಂದಿರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಪಾಲಂದಿರ ಜಯ ದಾಖಲಿಸಿತು. ಪಾಲಂದಿರ ಪರ ಚೆಂಗಪ್ಪ ಹಾಗೂ ಜೀವನ್ ತಲಾ 1 ಗೋಲು ದಾಖಲಿಸಿದರು. ಬಿದ್ದಾಟಂಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಂಡಂಗಡ ಮತ್ತು ಬೇರೆರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬೇರೆರ ತಂಡ ಗೆಲುವು ಸಾಧಿಸಿತು. ಬೇರೆರ ಮಿಥುನ್ ಬೆಳ್ಯಪ್ಪ 2 ಗೋಲು ದಾಖಲಿಸಿದರು. ಮಂಡಂಗಡ ವಿಖ್ಯಾತ್ ಮಂದಣ್ಣ 1 ಗೋಲು ದಾಖಲಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪುಳ್ಳಂಗಡ ಮತ್ತು ಮಲ್ಲಂಗಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪುಳ್ಳಂಗಡ ತಂಡ ಜಯ ಸಾಧಿಸಿತು. ಪುಳ್ಳಂಗಡ ಪರ ಪೊನ್ನಪ್ಪ 2 ಹಾಗೂ ರೊನಿತ್ 1 ಗೋಲು ದಾಖಲಿಸಿದರು. ಮಲ್ಲಂಗಡ ಪರ ಲೇಖನ್ 1 ಗೋಲು ಬಾರಿಸಿದರು. ಮಲ್ಲಂಗಡ ಆಕಾಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಚ್ಚಾಮಾಡ ಮತ್ತು ಅಜ್ಜೇಟಿರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಜ್ಜೇಟಿರ ಜಯ ಸಾಧಿಸಿತು. ಅಜ್ಜೇಟಿರ ಪರ ಮೋಹನ್ ಸೋಮಯ್ಯ ಗೋಲು ದಾಖಲಿಸಿದರು. ಮಚ್ಚಾಮಾಡ ವಿದ್ಯಾ ಪೊನ್ನಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕುಪ್ಪಂಡ (ಕೈಕೇರಿ) ಮತ್ತು ಮಾಳೆಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ದಾಖಲಿಸಿತು. ಕುಪ್ಪಂಡ ಪರ ಜಗತ್ 2 ಗೋಲು ದಾಖಲಿಸಿದರು. ಮಾಳೆಯಂಡ ರೋಹನ್ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ನಾಗಂಡ ಮತ್ತು ಚೆಂಬಾಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನಾಗಂಡ ತಂಡ ಜಯ ಸಾಧಿಸಿತು. ನಾಗಂಡ ಪರ ದಿವಿನ್ 2, ನಾಚಪ್ಪ ಹಾಗೂ ಕಿರಣ್ ಕಾರ್ಯಪ್ಪ ತಲಾ 1 ಗೋಲು ದಾಖಲಿಸಿದರು. ಚೆಂಬಾಂಡ ಸುಬ್ಬಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
———————————————
*ಮೈದಾನ 3*
ತೀತಮಾಡ ಮತ್ತು ತಾತಂಡ ತಂಡಗಳ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ತೀತಮಾಡ ತಂಡ ಗೆಲುವು ದಾಖಲಿಸಿತು. ತೀತಮಾಡ ಪರ ಟಿ.ಕೆ.ಬೋಪಣ್ಣ ಹಾಗೂ ಸುಜಿ ಸೋಮಯ್ಯ ತಲಾ 1 ಗೋಲು ದಾಖಲಿಸಿದರು. ತೀತಮಾಡ ಪರ ಟಿ.ಡಿ.ಬೋಪಣ್ಣ 1 ಗೋಲು ಬಾರಿಸಿದರು. ತಾತಂಡ ತಿಮ್ಮಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ತಾಚಮಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಐನಂಡ ತಂಡ ಜಯ ಸಾಧಿಸಿತು. ಐನಂಡ ಪರ ಆಕಾಶ್ ಪೂವಣ್ಣ ಭರ್ಜರಿ 4 ಗೋಲು ದಾಖಲಿಸಿದರು. ನಿರನ್ ಕುಶಾಲಪ್ಪ ಹಾಗೂ ರಂಜನ್ ತಲಾ 1 ಗೋಲು ಬಾರಿಸಿದರು. ಗೋಲ್ ಕೀಪರ್ ರತೀಶ್ ಬೆಳ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಐಚೆಟ್ಟಿರ ಮತ್ತು ಕಾಳೆಯಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಐಚೆಟ್ಟಿರ ಜಯ ದಾಖಲಿಸಿತು. ಐಚೆಟ್ಟಿರ ಪರ ಪ್ರತಿಕ್ ದೇವಯ್ಯ ಭರ್ಜರಿ 4 ಗೋಲು ದಾಖಲಿಸಿದರು. ತನಿಶ್ ಅಯ್ಯಣ್ಣ ಹಾಗೂ ಹೃತಿಕ್ ಪೂವಣ್ಣ ತಲಾ 1 ಗೋಲು ದಾಖಲಿಸಿದರು. ಕಾಳೆಯಂಡ ಯುವ ಮುತ್ತಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಳಕಂಡ ಮತ್ತು ಬಲ್ಲಣಮಾಡ ನಡುವೆ ನಡೆದ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕಳಕಂಡ ವಿಜಯ ಸಾಧಿಸಿತು. ಕಳಕಂಡ ಪರ ಭುವನ್ 2 ಗೋಲು ದಾಖಲಿಸಿದರು. ಬಲ್ಲಣಮಾಡ ತೆಜಸ್ ತಮ್ಮಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅಪ್ಪಚ್ಚೀರ ಮತ್ತು ನಾಳಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ನಾಳಿಯಂಡ ತಂಡ ಗೆಲುವು ಸಾಧಿಸಿತು. ನಾಳಿಯಂಡ ಪರ ದೀಕ್ಷಿತ್ ಕುಟ್ಟಪ್ಪ 1 ಗೋಲು ಬಾರಿಸಿದರು. ಗೋಲ್ ಕೀಪರ್ ಶರತ್ ಸೋಮಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕೊಂಗೇಟಿರ ಮತ್ತು ಪಂದ್ಯಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಕೊಂಗೇಟಿರ ತಂಡ ಗೆಲುವು ದಾಖಲಿಸಿತು. ಕೊಂಗೇಟಿರ ಪರ ಪ್ರೇಮ್ ಪೆಮ್ಮಯ್ಯ 2, ನಿಲೇಶ್ ಮಾದಪ್ಪ ಹಾಗೂ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಗೋಲ್ ಕೀಪರ್ ವರುಣ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.