








ಕುಶಾಲನಗರ, ಏ.13 NEWS DESK : ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶೃತಿ .ಎಸ್. ಮಂಜುನಾಥ್ ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ 43ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ.ಪದವಿಯ ಪ್ರಶಸ್ತಿಯನ್ನು ಉನ್ನತ ಶಿಕ್ಷಣ ಸಚಿವ ಸುಧಾಕರ್ ಪಡೆದುಕೊಂಡರು. ಮಂಗಳೂರು ವಿಶ್ವವಿದ್ಯಾನಿಲಯದ ರಾಸಾಯನ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕಿ ಪ್ರೊಫೆಸರ್ ಬಿ. ವಿಶಾಲಾಕ್ಷಿ ಅವರ ಮಾರ್ಗದರ್ಶನದಲ್ಲಿ “ಹೈಬ್ರೀಡ್ ಪಾಲಿಮರ್ ನ್ಯಾನೋಕೋಪೋಸೈಟ್ಸ್ : ಸಿಂಥೆಸೀಸ್ ಕ್ಯಾರಕ್ಟರೈಷೇಶನ್ಸ್ ಅಂಡ್ ಅಪ್ಲಿಕೇಶನ್ಸ್ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿ ಪಡೆದರು. ಶೃತಿ ಸೋಮವಾರಪೇಟೆಯ ಪುಷ್ಪಾ ಎಸ್ ಸಾಲಿಯಾನ್ ಅವರ ಪುತ್ರಿ. ಚಿಕ್ಕ ಅಳುವಾರ ಗ್ರಾಮದ ಸಿ.ಕೆ.ಉದಯ್ ಕುಮಾರ್ ಮತ್ತು ಮಾದೇವಿ ದಂಪತಿಯ ಸೊಸೆ.