










ವಿರಾಜಪೇಟೆ ಏ.13 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಕದನೂರು ಹಾಗೂ ಅರಮೇರಿ ಗ್ರಾಮದ ಪನ್ನಂಗಾಲತಮ್ಮೆ ದೇವಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಕೆಲವು ಸಮಯ ದೇವಿಯ ಸನ್ನಿಧಿಯಲ್ಲಿ ಕಳೆದ ಶಾಸಕರು ಸ್ಥಳೀಯರಿಂದ ಹಾಗೂ ಅರ್ಚಕರಿಂದ ದೇವಿಯ ಮಹಾತ್ಮೆಯ ಬಗ್ಗೆ ಅರಿತುಕೊಂಡರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣ್ಣಚ್ಚ, ವಲಯ ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.