










ಮಡಿಕೇರಿ ಏ.13 NEWS DESK : ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಹನ್ನೆರಡನೇ ಶತಮಾನದ ಮಹಾಶಿವಶರಣೆ ಪ್ರಥಮ ಕವಯತ್ರಿ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮವನ್ನು ಮಹದೇವಪೇಟೆಯ ಬಸವೇಶ್ವರ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಕ್ಕನಬಳಗದ ಅಧ್ಯಕ್ಷೆ ವದುಂಧರ ಪ್ರಸನ್ನ ಮಾತನಾಡಿ, ಚಿಕ್ಕವಯಸ್ಸಿನಲ್ಲಿಯೇ ವೈರಾಗ್ಯಮತಿಯಾದ ಮಹಾದೇವಿ ತಮ್ಮಲ್ಲಿನ ಅಗಾಧವಾದ ಜ್ಞಾನದಿಂದಾಗಿ ಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮ ಪ್ರಭು ಅವರಿಂದ ಅಕ್ಕಾಮಹಾದೇವಿ ಎಂದು ಕರೆಸಿಕೊಂಡ ಶ್ರೇಷ್ಠ ಶಿವಶರಣೆಯ ಆದರ್ಶಗಳನ್ನು ಮಹಿಳೆಯರು ಹಾಗೂ ಮಕ್ಕಳು ಅರಿಯಬೇಕು ಎಂದರು. ಈ ಸಂದರ್ಭ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಕ್ಕನಬಳಗದ ಕಾರ್ಯದರ್ಶಿ ಬಿ.ಎಸ್.ನಾಗರತ್ನ ಶಿವಕುಮಾರ್, ಪದಾಧಿಕಾರಿಗಳಾದ ವಸುಂದರ, ಲೀಲಾ, ರೂಪ, ಶೈಲಾ, ದಿವ್ಯ, ಮಂಜುಳಾ, ಧನ್ಯ, ಕವಿತಾ, ಪ್ರೇಮ, ಶೋಭಾ ಕಮಲಾಮಣಿ, ಗೀತಾ ಬಸವರಾಜು, ಸಾಕಮ್ಮ ಪ್ರಭಾಕರ್, ಕವಿತಾ ಹರೀಶ್, ಪ್ರೇಮಾ ಜಡ.ಕೋಟಿ, ಗೀತಾ ಲೀಲಾ ಉಳ್ಳಾಗಡ್ಡಿ, ಗೀತಾ
ದೇವಾಲಯ ಸಮಿತಿ ಅಧ್ಯಕ್ಷರಾದ ರುದ್ರಪ್ರಸನ್ನ, ಕಾರ್ಯದರ್ಶಿ ಪ್ರಶಾಂತ್, ಮಣಿ ಮುರುಗೇಶ್, ಅರ್ಚಕ ಪ್ರಕಾಶ್ ಪೂಜಾರಿ ಪೂಜಾ ವಿಧಿ ನಡೆಸಿಕೊಟ್ಟರು.
ಈ ಸಂದರ್ಭ ಮಹಿಳೆಯರು ಹಾಗೂ ಮಕ್ಕಳಿಂದ ಅಕ್ಕನ ವಚನಗಳ ಗಾಯನ ನಡೆಯಿತು. ಅಕ್ಕ ಮಹಾದೇವಿ ಜೀವನ ಸಾಧನೆಯ ಕುರಿತಾದ ಪ್ರವಚನ ನಡೆಯಿತು.