









ಮಡಿಕೇರಿ ಏ.14 NEWS DESK : ಬೆಂಗಳೂರಿನ ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘ ನೀಡುವ “ಛಾಯಾ ಶ್ರೀ ” ಪ್ರಶಸ್ತಿಗೆ ಮಡಿಕೇರಿಯ ಜಿ.ಆರ್.ಗಿರೀಶ್ ಭಾಜನರಾಗಿದ್ದಾರೆ. ಮಡಿಕೇರಿಯ ಗೌಳಿಬೀದಿಯ ನಿವಾಸಿಯಾಗಿರುವ ಗಿರೀಶ್ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದು, ಛಾಯಾ ಗ್ರಾಹಕರ ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಛಾಯಾಚಿತ್ರ ಕ್ಷೇತ್ರದಲ್ಲಿ ಗಿರೀಶ್ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಛಾಯಾ ಗ್ರಾಹಕರ ಸಂಘದ *”ಡಿಜಿ ಇಮೇಜ್ 2025″ರ* ವಸ್ತು ಪ್ರದರ್ಶನದಲ್ಲಿ ” *”ಛಾಯಾ ಶ್ರೀ”* ಗೌರವವನ್ನು ನೀಡಿ ನಾಡಿನ ಸಮಸ್ತ ಛಾಯಾ ಗ್ರಾಹಕರ ಪರವಾಗಿ ಅಭಿನಂದನಾ ಪೂರ್ವಕವಾಗಿ ಸನ್ಮಾನಿಸಿ, ಗೌರವಿಸಲಾಯಿತು.