









*ಮೈದಾನ 1*
ಮೇರಿಯಂಡ ಮತ್ತು ಕುಟ್ಟಂಡ (ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಪಂದ್ಯದಲ್ಲಿ ತಲಾ 3 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 8-7 ಗೋಲುಗಳ ಅಂತರದಲ್ಲಿ ಮೇರಿಯಂಡ ಗೆಲುವು ಸಾಧಿಸಿತು. ಮೇರಿಯಂಡ ಪರ ರಾಯಲ್ ಅಯ್ಯಣ್ಣ 2 ಹಾಗೂ ಸಚಿನ್ ಸೋಮಣ್ಣ 1 ಗೋಲು ದಾಖಲಿಸಿದರು. ಕುಟ್ಟಂಡ ಪರ ವಿಬಿನ್ ಅಯ್ಯಪ್ಪ 2, ರಾಜಿನ್ ಬಿದ್ದಪ್ಪ 1 ಗೋಲು ದಾಖಲಿಸಿದರು. ಕುಟ್ಟಂಡ ಪಾರ್ತ್ ಪೂಣಚ್ಚ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊವ್ವೇರಿಯಂಡ ಮತ್ತು ಅಜ್ಜಿನಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಬೊವ್ವೇರಿಯಂಡ ಜಯ ಸಾಧಿಸಿತು. ಬೊವ್ವೇರಿಯಂಡ ಪರ ನಿತೀನ್ ಅಪ್ಪಯ್ಯ ಹ್ಯಾಟ್ರೀಕ್ ಗೋಲು ಬಾರಿಸಿದರೆ, ಜಿತನ್ 2 ಗೋಲು ದಾಖಲಿಸಿದರು. ಅಜ್ಜಿನಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನೆರವಂಡ ಮತ್ತು ಬೇರೆರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ನೆರವಂಡ ಪರ ನಾಚಪ್ಪ ಹಾಗೂ ಪ್ರಶಾಂತ್ ತಲಾ 1 ಗೋಲು ದಾಖಲಿಸಿದರು. ಬೇರೆರ ಬೆಳ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಂಡೇಡ ಮತ್ತು ಚೆರುಮಾಡಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 5-4 ಗೋಲುಗಳ ಅಂತರದಲ್ಲಿ ಚೆರುಮಾಡಂಡ ತಂಡ ಜಯ ಸಾಧಿಸಿತು. ಚೇರುಮಾಡಂಡ ಪರ ಗಣಪತಿ ಹಾಗೂ ಮಂಡೇಡ ಪರ ಗಿರೀಶ್ ಕಾವೇರಪ್ಪ ಗೋಲು ದಾಖಲಿಸಿದರು. ಮಂಡೇಡ ಅಚ್ಚಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುರುವಂಡ ಮತ್ತು ಮೂಕಳಮಾಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಮುರುವಂಡ ತಂಡ ಗೆಲುವು ದಾಖಲಿಸಿತು. ಮುರುವಂಡ ಪರ ಮಿಥುನ್ ಅಣ್ಣಯ್ಯ 2 ಹಾಗೂ ಶಶಾಂಕ್ ಅಪ್ಪಣ್ಣ 1 ಗೋಲು ಬಾರಿಸಿದರು. ಬೋಪಣ್ಣ 1 ಗೋಲು ದಾಖಲಿಸಿದರು. ಮೂಕಳಮಾಡ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಂಡೇಪಂಡ ಮತ್ತು ಪಾಲಂದಿರ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಮಂಡೇಪಂಡ ತಂಡ ಜಯ ಸಾಧಿಸಿತು. ಮಂಡೇಪಂಡ ಪರ ಗೌತಮ್ 2 ಹಾಗೂ ಕವನ್ ಮುತ್ತಪ್ಪ 1 ಗೋಲು ದಾಖಲಿಸಿದರು. ಪಾಲಂದಿರ ಪರ ಸಂದೇಶ್ ನಾಣಯ್ಯ 1 ಗೋಲು ಬಾರಿಸಿದರು. ಪಾಲಂದಿರ ಅಪ್ಪಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2*
ಕುಮ್ಮಂಡ ಮತ್ತು ತಂಬುಕುತ್ತೀರ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 4-3 ಗೋಲುಗಳ ಅಂತರದಲ್ಲಿ ಕುಮ್ಮಂಡ ತಂಡ ಗೆಲುವು ಸಾಧಿಸಿತು. ತಂಬುಕುತ್ತೀರ ರಘು ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚೀರಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಗೆಲುವು ಸಾಧಿಸಿತು. ಪುದಿಯೊಕ್ಕಡ ಪರ ಮಿಥುನ್ ಪೊನ್ನಪ್ಪ, ಸುಮನ್ ಮುತ್ತಣ್ಣ, ಬಾಗೇಶ್ ಹಾಗೂ ಪ್ರಧಾನ್ ಸೋಮಣ್ಣ ತಲಾ 1 ಗೋಲು ದಾಖಲಿಸಿದರು. ಚೀರಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆಪ್ಪುಡಿರ ಮತ್ತು ಕೈಪಟ್ಟಿರ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ದಾಖಲಿಸಿತು. ಚೆಪ್ಪುಡಿರ ಪರ ನರೇನ್ ಕಾರ್ಯಪ್ಪ, ಚೇತನ್ ಚಿಣ್ಣಪ್ಪ, ಪ್ರಣಾವ್ ತಮ್ಮಯ್ಯ, ಗಗನ್ ತಿಮ್ಮಯ್ಯ ಹಾಗೂ ಸೋಮಣ್ಣ ತಲಾ 1 ಗೋಲು ದಾಖಲಿಸಿದರು. ಕೈಪಟ್ಟಿರ ಚೆಶ್ವಿನ್ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೇವಡ ಮತ್ತು ಕರ್ತಮಾಡ ನಡುವಿನ ಪಂದ್ಯದಲ್ಲಿ ಕರ್ತಮಾಡ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕರ್ತಮಾಡ ಪರ ಲವರಾಜ್, ಅಯ್ಯಪ್ಪ, ಲಿತೇಶ್ ಹಾಗೂ ಬೆಳ್ಯಪ್ಪ ತಲಾ 1 ಗೋಲು ದಾಖಲಿಸಿದರು. ಮೇವಡ ಜಶಾಂತ್ ತಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಿಂಡಮಾಡ ಮತ್ತು ಅಟ್ರಂಗಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಅಟ್ರಂಗಡ ತಂಡ ಗೆಲುವು ದಾಖಲಿಸಿತು. ಅಟ್ರಂಗಡ ಪರ ನರ್ತನ್ ನಾಚಪ್ಪ ಹಾಗೂ ನಿತಿನ್ ಕುಟ್ಟಪ್ಪ ತಲಾ 1 ಗೋಲು ದಾಖಲಿಸಿದರು. ಚಿಂಡಮಾಡ ಪಡ ತೀರ್ಥನ್ 1 ಗೋಲು ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಳವಂಡ ಮತ್ತು ಅರೆಯಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮಳವಂಡ ತಂಡ ಜಯ ಸಾಧಿಸಿತು. ಮಳವಂಡ ಪರ ತಕ್ಷಕ್ ಬಿದ್ದಪ್ಪ ಹಾಗೂ ಅದೀತ್ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಅರೆಯಡ ಶರವಣ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.