
ಕುಶಾಲನಗರ ಏ.17 NEWS DESK : ಅಂಕನಹಳ್ಳಿ ತಪೋವನ ಕ್ಷೇತ್ರದ ಶ್ರೀ ಗುರುಸಿದ್ಧ ವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಹಾಗೂ ಗುರುವಂದನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಶ್ರಾಂತ ನ್ಯಾಯಾಧೀಶರಾದ ಎಂ ಆರ್ ದೇವಪ್ಪ, ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ವಿರೂಪಾಕ್ಷಯ್ಯ ಖೋ ಖೋ ತಂಡದ ಆಟಗಾರ್ತಿ ವಿಶ್ವಕಪ್ ವಿಜೇತೆ ಕುಮಾರಿ ಚೈತ್ರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ ವಿಕ್ರಂ ಖಾತ, ಭಾರತ ಕಿರಿಯರ ಹಾಕಿ ತಂಡದ ತರಬೇತುದಾರ ಏಷ್ಯಾ ಕಪ್ ವಿಜೇತ ಸಿ ಬಿ ಜನಾರ್ಧನ್, ಭರತನಾಟ್ಯ ಕಲಾವಿದೆ ಮಿಲನ ಭರತ್ ,ಪ್ರಗತಿಪರ ಕೃಷಿಕ ಡಿ ಬಿ ಧರ್ಮಪ್ಪ ,ನಿವೃತ್ತ ಸೈನಿಕ ಲೋಕೇಶ್ ಸುವರ್ಣ, ಸಾಹಿತಿ ಉಳುವಂಗಡ ಕಾವೇರಿ ಉದಯ್, ಗೋರಕ್ಷಕರಾದ ಡಾ. ರಾಜಾರಾಮ್, ಡಿ ವೈ ಎಸ್ ಪಿ ಪರಶಿವಮೂರ್ತಿ, ಹಿರಿಯ ಪತ್ರಕರ್ತರಾದ ಕೆ ವಿ ಪರಮೇಶ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಚಂದ್ರಮೋಹನ್, ಪತ್ರಕರ್ತೆ ಶ್ರೇಯ, ಶಿಲ್ಪಿಗಳಾದ ರವಿ ಸುಂದರ್, ಹಾರನಹಳ್ಳಿ ಮಾದಣ್ಣ, ಉದ್ಯಮಿ ಯೋಗಣ್ಣ ಜಿ ಪ ಮಾಜಿ ಅಧ್ಯಕ್ಷೆ ಜಯಮ್ಮಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಅರಮೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕಿರಿ ಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಶ್ರೀ ಮಹಾಂತ ಸ್ವಾಮೀಜಿ, ಮುದ್ದಿನ ಕಟ್ಟೆ ಮಠಾಧೀಶರಾದ ಅಭಿನವ ಶಿವಾಚಾರ್ಯ ಸ್ವಾಮೀಜಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಡಗು ಮೈಸೂರು ಲೋಕಸಭಾ ಸದಸ್ಯ ಯದುವೀರ್ ಕೃಷ್ಣ ದತ್ತ ಒಡೆಯರ್, ಕ್ಷೇತ್ರ ಶಾಸಕ ಡಾ ಮಂತರ್ ಗೌಡ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಸಕಲೇಶಪುರ ಶಾಸಕ ಮಂಜುನಾಥ್, ಬೇಲೂರು ಶಾಸಕ ಸುರೇಶ್, ಹಿರಿಯ ವಕೀಲರಾದ ಚಂದ್ರಮೌಳಿ, ಪ್ರಮುಖರಾದ ಜಿ ಎಂ ಕಾಂತರಾಜ್ ,ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್ ವಿ ಶಿವಪ್ಪ ಕಾರ್ಯಕ್ರಮ ಆಯೋಜಕ ಎಸ್ ಮಹೇಶ್ ಮತ್ತಿತರರು ಇದ್ದರು.









