
ನಾಪೋಕ್ಲು ಏ.19 NEWS DESK : ಪಾಲೂರು ಗ್ರಾಮದ ಶ್ರೀಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಏ.13 ರಂದು ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಬೆಳಿಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ ನೆರವೇರಿತು. ಮರುದಿನ ಪಟ್ಟಣಿ ಹಬ್ಬ ಉತ್ಸವದ ಅಂಗವಾಗಿ ಬೆಳಿಗ್ಗೆ ತುಲಾ ಭಾರಸೇವೆ ಸೇರಿದಂತೆ ವಿವಿಧ ಹರಕೆ ಸೇವೆ ಕಾಣಿಕೆಗಳನ್ನು ಒಪ್ಪಿಸಿ ಮಧ್ಯಾಹ್ನ ಎತ್ತು ಪೆÇೀರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ವಿಶೇಷ ಸೇವೆಗಳು ಜರುಗಿ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿತರಣೆ ಮತ್ತು ಉತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಂತರ ಜೋಡಿ ದೇವರ ನೃತ್ಯೋತ್ಸವ ನಡೆಯಿತು. ದೇವಾಲಯದ ಮುಖ್ಯ ಅರ್ಚಕ ದೇವಿಪ್ರಸಾದ್, ತಂತ್ರಿಗಳಾಗಿ ಕೃಷ್ಣ ಮತ್ತು ಸತ್ಯಮೂರ್ತಿ ಸರಳಾಯ, ಕೃಷ್ಣಮೂರ್ತಿ ಇನ್ನಿತರರು ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಜಾತ್ರಾ ಮಹೋತ್ಸವದಲ್ಲಿ ದೇವಾಲಯದ ಬಂಡಾರ ತಕ್ಕರಾದ ಎಡಕೇರಿ ಪ್ರವೀಣ್, ಸಮಿತಿ ಅಧ್ಯಕ್ಷರು ಪೆÇದವಾಡ ಸುಜೈ, ಕಾರ್ಯದರ್ಶಿ ಸೂಧನ ಮದನ್ ಹಾಗೂ ಸದಸ್ಯರು, ಪಾರುಪತ್ತೆಗಾರ ಟಿ.ಕೆ.ಮನು, ತಕ್ಕ ಮುಖ್ಯಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಊರ ಮತ್ತು ಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









