Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*
  • *ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*
  • *ಸಮಾಜಮುಖಿ ಸೇವೆ ಪರಿಗಣಿಸಿ ಕೇಳೇಟಿರ ದೀಪು ದೇವಯ್ಯ ಸನ್ಮಾನ*
  • *ನಾಪೋಕ್ಲು: ‘ಕ್ಲೀನ್ ಅಪ್’ ವತಿಯಿಂದ ಯಶಸ್ವಿ ಸ್ವಚ್ಛತಾ ಅಭಿಯಾನ*
  • *ಅಕ್ಟೋಬರ್ 20ರಂದು ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಹಾಗೂ ಸಂಗೀತ ರಸಮಂಜರಿ*
  • *ಅ.1ರಂದು ಸಿದ್ದಾಪುರದಲ್ಲಿ ಸಿಎನ್‌ಸಿಯಿಂದ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*
  • *ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ*
  • *ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳು ಪೂರಕ: ಆನಂದ್ ಸುವರ್ಣ*
  • *ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮೇ 12 ರಿಂದ 21ರವರೆಗೆ ಮೂರ್ನಾಡಿನಲ್ಲಿ ಮಕ್ಕಳ ಉಚಿತ “ಚಿನ್ತನೆ – ಚಲನೆ” ಶಿಬಿರ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮೇ 12 ರಿಂದ 21ರವರೆಗೆ ಮೂರ್ನಾಡಿನಲ್ಲಿ ಮಕ್ಕಳ ಉಚಿತ “ಚಿನ್ತನೆ – ಚಲನೆ” ಶಿಬಿರ*

ಏಪ್ರಿಲ್ 30, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.30 NEWS DESK : ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೇ 12 ರಿಂದ 21ರವರೆಗೆ ಮೂರ್ನಾಡಿನಲ್ಲಿ ಮಕ್ಕಳ ಉಚಿತ “ಚಿನ್ತನೆ – ಚಲನೆ” ಶಿಬಿರ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ 10 ದಿನಗಳ ಕಾಲ ನಡೆಯುವ ಶಿಬಿರದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಕನ್ನಡದ ಮಹತ್ವವನ್ನು ಹೇಳಿಕೊಡಲಾಗುವುದು. ಕನ್ನಡ ಅಕ್ಷರ ಬರೆಯುವ, ಓದುವ, ಪದಗಳ ಜೋಡಣೆ ಮಾಡುವ ತಿಳುವಳಿಕೆ, ಹಳೆಗನ್ನಡ, ಸಂಸ್ಕೃತಿ, ಸಂಸ್ಕೃತ, ಆಟದ ಜೊತೆಗೆ ಕಲಿಕೆ, ಕವನ ವಾಚನ, ಕಲಿಕೆ, ಸಣ್ಣ ಕಥೆ, ಮಕ್ಕಳ ಕಥೆ, ಕಾದಂಬರಿ ಬರೆಯುವ ಕುರಿತು ತಿಳಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಾನಪದ ಮಹತ್ವ, ಜಾನಪದ ಹಾಡು, ನೃತ್ಯ ಕಲಿಕೆ, ಜಾನಪದ ಕ್ರೀಡೆ, ಸಿನಿಮಾ ಪ್ರಪಂಚಕ್ಕೆ ಸಂಬಂಧಿಸಿದಂತೆ ನಾಟಕ, ನಟನೆ, ಕಲಿಕೆ, ಏಕಪಾತ್ರಾಭಿನಯ, ಸಿನಿಮಾ ತಯಾರಿಕೆ, ಕೊಡಗಿನ ಸಾಮಾನ್ಯ ಜ್ಞಾನ ಹಾಗೂ ಮಕ್ಕಳ ಮುಂದಿನ ಭವಿಷ್ಯ, ವೃತ್ತಿಪರತೆ, ಪತ್ರಿಕೋದ್ಯಮ, ರಾಜಕೀಯ, ಪೊಲೀಸ್, ವೈದ್ಯಕೀಯ ಕಾನೂನು, ಶಿಕ್ಷಣ ಈ ಎಲ್ಲಾ ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಅರಿವು ಮೂಡಿಸಲು ನಿರ್ಧಾರ ಕೈಗೊಳ್ಳಲಾಯಿತು. ಕೊನೆಯ ದಿನ ಕಲಿಕೆಯ ಎಲ್ಲಾ ವಿಷಯಗಳ ಕುರಿತು ಸ್ಪರ್ಧೆ ನಡೆಸುವುದು, ವಿಜೇತರಾದ ಮಕ್ಕಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡುವುದು, ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು. 10 ದಿನಗಳು ನಡೆಯುವ ಶಿಬಿರದ ಮಾಹಿತಿಯನ್ನು ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡುವ ಕುರಿತು ನಿರ್ಧರಿಸಲಾಯಿತು ಎಂದು ಈರಮಂಡ ಹರಿಣಿ ವಿಜಯ್ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾಸ್ಪತ್ರೆ ತುರ್ತು ಘಟಕದ ಮುಖ್ಯಸ್ಥ ಡಾ.ಮೋಹನ್ ಅಪ್ಪಾಜಿ, ದಂತವೈದ್ಯೆ ಡಾ.ಅನುಶ್ರೀ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಿಲ್ಲಾ ಕ.ಸಾ.ಪ.ದ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಶಕ್ತಿ ಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್, ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹ್ಮದ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ಅವರುಗಳು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತರು ಮೊ.ಸಂ. 9945976332, 9449562149, 9008751032 ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು. ಸಭೆಯಲ್ಲಿ ಕೋಶಾಧಿಕಾರಿ ಮಡೆಯಂಡ ಸೂರಜ್, ಸಂಘಟನಾ ಕಾರ್ಯದರ್ಶಿ ಮಮತಾ ಕೊಂಪುಳಿರ, ಅಪ್ಪಚಂಡ ಸುಚಿತ ಕಾವೇರಪ್ಪ, ಪ್ರತಿನಿಧಿ ಕೆ.ಎ.ಖಾದರ್, ವಿಶೇಷ ಅಹ್ವಾನಿತರಾದ ಕಿಗ್ಗಾಲು ಎಸ್.ಗಿರೀಶ್, ಪುದಿಯೊಕ್ಕಡ ರಮೇಶ್, ಬಿ.ಎಂ.ಧನಂಜಯ, ಸದಸ್ಯರಾದ ಬಿ.ಎನ್.ಗಿರೀಶ್, ಡೈಸಿ, ಜಮುನಾ ಉಪಸ್ಥಿತರಿದ್ದರು. ಕಸಾಪ ಮೂರ್ನಾಡು ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ ಸ್ವಾಗತಿಸಿ, ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

*2030ಕ್ಕೆ ಭಾರತದಲ್ಲಿ ಮಲೇರಿಯಾ ಮುಕ್ತ, ಕೊಡಗು ಜಿಲ್ಲೆಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 28, 2026

*ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*

ಸೆಪ್ಟೆಂಬರ್ 28, 2026

*ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*

ಸೆಪ್ಟೆಂಬರ್ 28, 2026

*ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ, ರಕ್ತಹೀನತೆ ತಡೆಗಟ್ಟಬಹುದು : ಮಹೇಶ್*

ಸೆಪ್ಟೆಂಬರ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಸೆ.28 NEWS DESK : ಪೋಷಣ್ ಮಾಸಾಚರಣೆಯ ಅಂಗವಾಗಿ ಕಾನ್ವೆಂಟ್ ಜಂಕ್ಷನ್ ಅಂಗನವಾಡಿ ಕೇಂದ್ರದಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಹಾಗೂ…

*ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ : ವಿಚಾರಣೆಗೆ ಬಾಕಿ ಇರುವ ಮತದಾರರ ಮನೆ ಮನೆಗೆ ಬಿಎಲ್‍ಒಗಳು ಭೇಟಿ : ಜಿಲ್ಲಾಧಿಕಾರಿ*

ಸೆಪ್ಟೆಂಬರ್ 28, 2026

*ಸಮಾಜಮುಖಿ ಸೇವೆ ಪರಿಗಣಿಸಿ ಕೇಳೇಟಿರ ದೀಪು ದೇವಯ್ಯ ಸನ್ಮಾನ*

ಸೆಪ್ಟೆಂಬರ್ 28, 2026

*ನಾಪೋಕ್ಲು: ‘ಕ್ಲೀನ್ ಅಪ್’ ವತಿಯಿಂದ ಯಶಸ್ವಿ ಸ್ವಚ್ಛತಾ ಅಭಿಯಾನ*

ಸೆಪ್ಟೆಂಬರ್ 28, 2026

*ಅಕ್ಟೋಬರ್ 20ರಂದು ವಿರಾಜಪೇಟೆಯಲ್ಲಿ 19ನೇ ವರ್ಷದ ಅದ್ದೂರಿ ಆಯುಧಪೂಜೆ ಹಾಗೂ ಸಂಗೀತ ರಸಮಂಜರಿ*

ಸೆಪ್ಟೆಂಬರ್ 28, 2026

*ಅ.1ರಂದು ಸಿದ್ದಾಪುರದಲ್ಲಿ ಸಿಎನ್‌ಸಿಯಿಂದ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ*

ಸೆಪ್ಟೆಂಬರ್ 28, 2026

*ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ*

ಸೆಪ್ಟೆಂಬರ್ 28, 2026

*ಮಹಿಳಾ ಸಬಲೀಕರಣಕ್ಕೆ ಜ್ಞಾನ ವಿಕಾಸ ಕಾರ್ಯಕ್ರಮಗಳು ಪೂರಕ: ಆನಂದ್ ಸುವರ್ಣ*

ಸೆಪ್ಟೆಂಬರ್ 28, 2026

*ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*

ಸೆಪ್ಟೆಂಬರ್ 28, 2026

*ಮಡಿಕೇರಿಯಲ್ಲಿ ಕೂರ್ಗ್ ವಿಂಗ್ಸ್ ಆಫ್ ಪ್ಯಾಶನ್ ಫಿಟ್ನೆಸ್ ತರಬೇತಿ : 7 ವರ್ಷಗಳ ಅನುಭವ : ತಕ್ಷಣ ಹೆಸರು ನೋಂದಾಯಿಸಿ*

ಸೆಪ್ಟೆಂಬರ್ 28, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.