
ಮಡಿಕೇರಿ ಮೇ 1 NEWS DESK : ಮರಗೋಡು ಗ್ರಾಮದ ಶ್ರೀ ಶಿವ ಪಾರ್ವತಿ ದೇವಾಲಯದಲ್ಲಿ ಪಟ್ಟಣಿ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಗ್ರಾಮದ ತಕ್ಕರ ಕುಟುಂಬಗಳಿಂದ ಎತ್ತು ಪೋರಾಟ ಹಾಗೂ ಕೊಡವ ಸಂಪ್ರದಾಯದಂತೆ ದುಡಿಕೊಟ್ಟು ಹಾಡಿನ ಮೂಲಕ ದೇವರಿಗೆ ದವಸ ಧಾನ್ಯಗಳನ್ನು ಸಮರ್ಪಸಲಾಯಿತು. ಮಧ್ಯಾಹ್ನದ ಮಹಾಪೂಜೆ ಜರುಗಿದ ನಂತರ ದೇವರ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಸಂಜೆ ದೇವರ ಉತ್ಸವ ಮೂರ್ತಿ ಹೊರಬಂದು ಸೇರಿದ ಭಕ್ತರಿಗೆ ದರ್ಶನ ನೀಡಿತು. ದೇವಾಲಯದಲ್ಲಿ, ತೆಂಗಿನಕಾಯಿಗೆ ಗುಂಡು ಹೊಡಿಯುವ(ದೇವರ ಕಟ್ಟು ಮುರಿಯುವುದು), ತೆಂಗೆ ಪೂರ್ ಹಾಗೂ ದೇವರ ಮಹಾಪೂಜೆ ಬಳಿಕ ಅನ್ನದಾನ ನಡೆಯಿತು. ಸಂಜೆ 6.30 ಗಂಟೆಗೆ ದೇವರ ಉತ್ಸವಮೂರ್ತಿ ಜಳಕಕ್ಕೆ ತೆರಳಿ ದೇವರ ಮಹಾ ಉತ್ಸವ ನಡೆಯಲಿದೆ.









