Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*
  • *ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*
  • *ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*
  • *ರೋಟರಿ ಮಡಿಕೇರಿಯಿಂದ ದಹನ ಯಂತ್ರ ವಿತರಣೆ*
  • *ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ : ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ*
  • *ನಾಪೋಕ್ಲು ಸುತ್ತಮುತ್ತ ಮದ್ಯ ಮಾರಾಟ ನಿಷೇಧ*
  • *ಸಾಕಾನೆ-ಡ್ರೋನ್ ಬಳಸಿ ಹುಲಿ ಶೋಧ*
  • *ಸೋಮವಾರಪೇಟೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ*
  • ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*
  • *ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬೇಕಲ ರಾಮ ನಾಯಕರು ಮಹಾನ್ ಸಾಧಕರು : ಚಂದ್ರಹಾಸ ಚಿತ್ತಾರಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬೇಕಲ ರಾಮ ನಾಯಕರು ಮಹಾನ್ ಸಾಧಕರು : ಚಂದ್ರಹಾಸ ಚಿತ್ತಾರಿ*

ಮೇ 2, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 2 NEWS DESK : ‘ಬೇಕಲ ರಾಮ ನಾಯಕರದ್ದು, ಸಾಹಿತ್ಯ ಸರಸ್ವತಿಯ ಮನಸ್ಸು. ಅವರ ನಿಸ್ವಾರ್ಥ ಸಾಹಿತ್ಯ ಸೇವೆಯು ಸಾರ್ವಕಾಲಿಕ ಆದರ್ಶ, ಸರ್ವರೂ ಒಂದಾಗಿ, ಸಹಬಾಳ್ವೆ ನಡೆಸಬೇಕೆಂಬ ಅರ್ಪಣಾ ಮನೋಭಾವ ಅವರ ಕೃತಿಗಳಲ್ಲಿವೆ. ಈ ಎಲ್ಲಾ ಕೃತಿಗಳೂ ಕೂಡಾ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ವರದಾನ’ ಎಂದು ಸಾಹಿತಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಹೇಳಿದರು. ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಡಾ.ವಾಮನ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೊಡಗು ಜಿಲ್ಲಾ ಕನ್ನಡ ಭವನ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಅಗ್ರಗಣ್ಯ ಸಾಹಿತಿ, ಇತಿಹಾಸ ಶಿಕ್ಷಕ ಮತ್ತು ಸಂಶೋಧಕರಾದ ಬೇಕಲ ರಾಮ ನಾಯಕರ ಬದುಕು – ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಮುಖಂಡ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಡಾ.ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ಸಹಿತ ಅನೇಕ ಮಂದಿ ಪುಷ್ಪಾರ್ಚನೆ ಮಾಡಿದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,’ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ಜತೆಗೆ, ದುಪ್ಪಟ್ಟು ವೇಗದಲ್ಲಿ ಕನ್ನಡವನ್ನು ಬೆಳೆಸಬೇಕಾದ ಅಗತ್ಯವಿದೆ. ಹೊಸ ಜನಾಂಗದಲ್ಲಿ ಕನ್ನಡದ ಭಾಷಾ ಪ್ರೇಮ ಅರಳಿಸುವ ನಿಟ್ಟಿನಲ್ಲಿ ಸಂಘಟನೆಯು ಯಶಸ್ವೀ ಹೆಜ್ಜೆಯನ್ನು ಇರಿಸಿದೆ. ಬಹಳಷ್ಟು ಮಂದಿ ಕನ್ನಡದ ಯುವ ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು. ನಿವೃತ್ತ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಸೋಮು ಎಸ್ ಹಿಪ್ಪರಗಿ, ಕೊಡಗು ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಎಂ.ಎ.ರುಬೀನಾ, ಮುಖಂಡರಾದ ಚಂದನ್ ನಂದರಬೆಟ್ಟು, ಅರುಣ್. ಲೋಹಿತ್ ಎಂ ಆರ್. ಗಿರೀಶ್ ಪಿ ಎಂ ಚಿತ್ತಾರಿ, ಪ್ರಕಾಶಕಿ ಸಂಧ್ಯಾರಾಣಿ ಟೇಚರ್, ಕಾಸರಗೋಡು ಜಿಲ್ಲಾ ಘಟಕದ ಕಾರ್ಯದರ್ಶಿ ದೇವರಾಜ್ ಆಚಾರ್ಯ ಸೂರಂಬೈಲ್, ವಸಂತ ಕೆರೆಮನೆ, ರಾಜೇಶ್ ಕೋಟೆಕಣಿ ಇದ್ದರು. ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿ ಸಯ್ಯದ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ನಂತರ ಹಿರಿಯ ಸಾಹಿತಿ ಕೆ.ನರಸಿಂಹ ಭಟ್ ಏತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ವಸಂತ ಚುಟುಕು ಕವಿಗೋಷ್ಠಿಯಲ್ಲಿ ಕಾಸರಗೋಡು ಹಾಗೂ ಕೊಡಗು ಜಿಲ್ಲೆಯ ಸುಮಾರು 20 ಕವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪ್ರಥಮ ಚುಟುಕು ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅವನಿ ಎಂ.ಬೆಳ್ಳೂರು, ಪೂಜ ಸಿ.ಹೆಚ್ ದೇಲಂಪಾಡಿ, ಕಾವ್ಯ ರಾವ್ ಕಾಸರಗೋಡು, ಗಾಯತ್ರಿ ಪಳ್ಳತ್ತಡ್ಕ, ವೈಶಾಲಿನಿ ಟಿ ಇವರಿಗೆ ಕಾಸರಗೋಡು ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿ-2025 ನೀಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅವರಿಗೆ ಬೇಕಲ ರಾಮ ನಾಯಕ ಸಾಹಿತ್ಯ ಪ್ರಶಸ್ತಿ ಹಾಗೂ ಸಂಘಟಕ ಮಂಗಳೂರಿನ ಡಾ.ರವೀಂದ್ರ ಜೆಪ್ಪು ಅವರಿಗೆ ಬೇಕಲ ರಾಮ ನಾಯಕ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಧ್ಯಾರಾಣಿ ಟೀಚರ್ ನೇತೃತ್ವದ ಕನ್ನಡ ಭವನ ಪ್ರಕಾಶನದ 7ನೇ ಕೃತಿಯಾದ, ಕವಯತ್ರಿ ಮೇಘಾ ಶಿವರಾಜ್ ಕಾಸರಗೋಡು ಅವರ ‘ಮೌನ ಮಾತಾದಾಗ’ ಕವನ ಸಂಕಲನವನ್ನು ಡಾ. ರವೀಂದ್ರ ಜೆಪ್ದು ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಡಾ. ಕೊಳ್ಚಪ್ಪೆ ಗೋವಿಂದ ಭಟ್ ಕೃತಿ ಪರಿಚಯ ಮಾಡಿದರು. ಸುಭಾಷಿಣಿ ಚಂದ್ರ ಕನ್ನಟಿಪ್ಪಾರ ಪ್ರಾರ್ಥನೆ ಹಾಡಿದರು. ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು ಸ್ವಾಗತಿಸಿದರು. ಸಂಘಟನೆಯ ಸ್ಥಾಪಕ ಸಂಚಾಲಕರಾದ ಡಾ.ವಾಮನ್ ರಾವ್ ಬೇಕಲ್ ವಂದಿಸಿದರು. ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಶ್ಮೀರ ಹುತಾತ್ಮರೀಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳ : ಯಶಸ್ಸಿಗೆ  ಪ್ರಾಂಶುಪಾಲರ ಮನವಿ*

ಮಾರ್ಚ್ 26, 2026

*ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*

ಮಾರ್ಚ್ 26, 2026

*ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*

ಮಾರ್ಚ್ 26, 2026

*ಸುಂಟಿಕೊಪ್ಪದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ರಾಮನವಮಿ*

ಮಾರ್ಚ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಸುಂಟಿಕೊಪ್ಪ ಮಾ.25 NEWS DESK : ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಕೋದಂಡರಾಮ ದೇವಾಲಯದಲ್ಲಿ…

*ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಮಹಿಳಾ ಘಟಕದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ*

ಮಾರ್ಚ್ 26, 2026

*ರೋಟರಿ ಮಡಿಕೇರಿಯಿಂದ ದಹನ ಯಂತ್ರ ವಿತರಣೆ*

ಮಾರ್ಚ್ 26, 2026

*ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ : ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿ*

ಮಾರ್ಚ್ 26, 2026

*ನಾಪೋಕ್ಲು ಸುತ್ತಮುತ್ತ ಮದ್ಯ ಮಾರಾಟ ನಿಷೇಧ*

ಮಾರ್ಚ್ 26, 2026

*ಸಾಕಾನೆ-ಡ್ರೋನ್ ಬಳಸಿ ಹುಲಿ ಶೋಧ*

ಮಾರ್ಚ್ 26, 2026

*ಸೋಮವಾರಪೇಟೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ*

ಮಾರ್ಚ್ 26, 2026

ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ಡಾ. ಎಂ.ಬಿ.ಬೋರಲಿಂಗಯ್ಯ ಅವರು ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ*

ಮಾರ್ಚ್ 25, 2026

*ಮಡಿಕೇರಿ : ಮಾ.27 ರಂದು ನಗರಸಭೆ ಕೌನ್ಸಿಲ್‍ನ ಸಾಮಾನ್ಯ ಸಭೆ*

ಮಾರ್ಚ್ 25, 2026

*ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಆತಂಕ*

ಮಾರ್ಚ್ 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.