
ಸಿದ್ದಾಪುರ ಮೇ 3 NEWS DESK : ಅಂಚೆಮನೆ ಕುಟುಂಬದ ವತಿಯಿಂದ ಅಭ್ಯತ್ ಮಂಗಲದ ಐನ್ ಮನೆಯಲ್ಲಿ ಹರಿಸೇವೆ ಶ್ರದ್ಧಾಭಕ್ತಿಯಿಂದ ನಡೆಯಿತು. ಅಂಚೆಮನೆ ಪಟ್ಟೆದಾರ ಗಣೇಶ್ ಅವರ ಸಮ್ಮುಖದಲ್ಲಿ ನಡೆದ ಹರಿಸೇವೆಯಲ್ಲಿ ವಿವಿಧ ಕೈಂಕರ್ಯಗಳನ್ನು ನಾರಾಯಣ ದಾಸ ಹಾಗೂ ಮುಕ್ಕಾಟಿ ಲಿಂಗಪ್ಪ ನಡೆಸಿಕೊಟ್ಟರು. 10 ಕುಟುಂಬ 18 ಗೋತ್ರಾದ ಕುಟುಂಸ್ಥರು ಪಾಲ್ಗೊಂಡು ಸಂಭ್ರಮಿಸಿದರು. ಕುಟ್ಟಪ್ಪ, ಪುಷ್ಪಾವತಿ, ಗಾನಾವತಿ ಮತ್ತಿತರ ಪ್ರಮುಖರು ಹಾಜರಿದ್ದರು.









