
ನಾಪೋಕ್ಲು ಮೇ 5 NEWS DESK : ಮೇಯಲು ಬಿಟ್ಟ ಹಸುವೊಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆ ನಾಪೋಕ್ಲುವಿನಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ಟಿ.ಎಂ.ಶ್ಯಾಮ್ ಎಂಬವರು ತಮ್ಮ ಗಬ್ಬದ ಹಸುವನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಈ ಸಂದರ್ಭ ಗದ್ದೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹಸು ಮೃತಪಟ್ಟಿದೆ ಎನ್ನಲಾಗಿದೆ. ಮಳೆ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಸಂಬಂಧಿಸಿದ (ಚೆಸ್ಕಾಂ) ಇಲಾಖೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪುತ್ರ ಸಂದೇಶ್ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ನಿವಾಸಿ ಕಾಫಿ ಬೆಳೆಗಾರ ಕಂಗಂಡ ಜಾಲಿ ಪೂವಪ್ಪ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಪಶುವೈದ್ಯೆ ಶಿಲ್ಪ ಹಸುವನ್ನು ಪರಿಶೀಲಿಸಿ ಸಾವಿನ ಕಾರಣವನ್ನು ದೃಢಪಡಿಸಿದರು.
ವರದಿ : ದುಗ್ಗಳ ಸದಾನಂದ









