
ನಾಪೋಕ್ಲು ಮೇ 6 NEWS DESK : ಕಕ್ಕಬೆಯ ನೆಟ್ಟುಮಾಡಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪೊನ್ನಿರ ಸ್ನೇಕ್ ಗಗನ್ ರಕ್ಷಿಸಿದ್ದಾರೆ. ಗ್ರಾಮದ ನಿವಾಸಿ ವೈಕೋಲ್ ಉಸ್ಮಾನ್ ಅವರ ಮನೆಯ ಸಮೀಪದಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳಾದ ಪಾಂಡ ನರೇಶ ಹಾಗೂ ರಘು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪೊನ್ನಿರ ಸ್ನೇಕ್ ಗಗನ್ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.
ವರದಿ : ದುಗ್ಗಳ ಸದಾನಂದ.









