
ನಾಪೋಕ್ಲು ಮೇ 6 NEWS DESK : ಈಸ್ಟ್‍ಕೋಳಕೇರಿಯ ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವವು ಮೇ 10 ರಂದು ನಡೆಸಲು ತೀರ್ಮಾನಿಸಲಾಗಿದೆ. ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯ ವರೆಗೆ ಗಣ ಹೋಮ, 9ಗಂಟೆ ಯಿಂದ 12.00 ಗಂಟೆ ವರೆಗೆ ಶತ ರುದ್ರಾಭಿಷೇಕ, ಹಾಗೂ ರುದ್ರಾಭಿಷೇಕ ಪೂಜೆ ಮಧ್ಯಾಹ್ನ 12 ಗಂಟೆಟೆಗೆ ಮಹಾಪೂಜೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









