
ನಾಪೋಕ್ಲು ಮೇ 10 NEWS DESK : ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಒಳಿತಾಗಲಿ ಎಂದು ಪಾಲೂರಿನ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಯೋತ್ಪಾದಕರ ಶಿಬಿರಗಳ ಮೇಲೆ “ಆಪರೇಷನ್ ಸಿಂಧೂರ” ಹೆಸರಿನಲ್ಲಿ ನಡೆದ ಸೇನಾ ಕಾರ್ಯಾಚರಣೆಯು ಯಶಸ್ವಿಯಾದ ಹಿನ್ನೆಲೆ ಭಾರತೀಯ ಸೇನಾ ಯೋಧರಿಗೆ ಮತ್ತಷ್ಟು ಶಕ್ತಿಯನ್ನು ಶ್ರೀ ಮಹಾಲಿಂಗೇಶ್ವರ ಅನುಗ್ರಹಿಸಲಿ ಎಂದು ಕ್ಷೇತ್ರದ ಮುಖ್ಯ ಪುರೋಹಿತರಾದ ದೇವಿಪ್ರಸಾದ್ ಪ್ರಾರ್ಥನೆ ಹಾಗೂ ಸಂಕಲ್ಪ, ರುದ್ರಾಭಿಷೇಕ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿದರು. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









