
ಮಡಿಕೇರಿ ಮೇ 12 NEWS DESK : ಕಟ್ಟೆಮಾಡು ಗ್ರಾಮದ ಬಿದ್ರುಪಣೆ ಕುಟುಂಬಸ್ಥರ ಐನ್ ಮನೆಯಲ್ಲಿ ಎರಡು ದಿನ ವೆಂಕಟರಮಣ ದೇವರ ಹರಿಸೇವೆ ಮತ್ತು ಪರಿವಾರ ದೈವಗಳ ನೇಮೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ನಡೆದ ದೈವ, ದೇವರ ಉತ್ಸವದಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ದೈವ, ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸತ್ಯದೇವತೆ, ಪಾಷಾಣಮೂರ್ತಿ, ಕುಕ್ಕತ್ತಿಬಲ್ಲು, ವರ್ಣ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಗುಳಿಗ, ಧರ್ಮದೇವತೆಯ ಕೋಲಗಳು ನಡೆದವು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.









