
ವಿರಾಜಪೇಟೆ ಮೇ 13 NEWS DESK : ಜಿಲ್ಲೆಯಲ್ಲಿ ನೆಲೆಸಿರುವ ವಿವಿಧ ಕುಟುಂಬಗಳು ವಿವಿಧ ಕ್ರೀಡೆಗಳನ್ನು ಅಯೋಜಿಸುವ ಮೂಲಕ ಸಮುದಾಯದ ಸಮಘಟನೆಗೆ ಮುಂದಾಗುತ್ತಿವೆ. ಅದರಂತೆ ಬಲಿಜ ನಾಯ್ಡು ಸಮಾಜವು ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದು, ಕ್ರೀಡಾಕೂಟಗಳು ಸಮುದಾಯದ ಸಮ್ಮಿಲನಕ್ಕೆ ವೇದಿಕೆಯಾಗಿದೆಯೆಂದು ಸಮಾಜದ ಪ್ರಮುಖರಾದ ಟಿ.ಪಿ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ ಆಯೋಜಿತ ದ್ವಿತೀಯ ವರ್ಷದ ಬಲಿಜ ಸಮಾಜದ ಕೌಟುಂಬಿ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಮಡು ಅವರು ಮಾತನಾಡಿದರು. ಸೋಲು ಗೆಲುವು ಎಂದಬುದು ನಾಣ್ಯದ ಎರಡು ಮುಖಗಳಿದ್ದಂತೆ ಮತ್ತು ಜೀವ ಪಾಠವೂ ಹೌದು. ಸೋತವರು ಗೆಲ್ಲಬೇಕು. ಗೆದ್ದವರು ಸೋಲಬೇಕು. ಇನ್ನು ಮಂದೆಯು ಕ್ರಿಡಾಕೂಟಗಳು ನಡೆಯಬೇಕು ಮತ್ತು ಸಮಾಜದ ಎಲ್ಲಾ ಕುಟುಂಭಗಳು ಸಕ್ರಿಯವಾಗಿ ಭಾಗವಹಿಸುವಂತಾಗಬೇಕೆಂದರು. ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಕೊಡಗು ಅಧ್ಯಕ್ಷರಾದ ಶ್ರೀನಿವಾಸ್ ಲೋಕನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಾಂಗ ಬಾಂಧವರ ಮಧ್ಯೆ ಸಾಮರಸ್ಯ ಬೆಳೆಯಬೇಕು ಎನ್ನುವ ಸದುದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಮುಂದೆಯು ಜನಾಂಗ ಬಾಂದವರು ಹೆಚ್ಚಿನ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು. ಉದ್ಯಮಿಗಳಾದ ರೋಹಿತ್ ಆನಂದ್, ದಯಾನಂದ್ ಮೈಸೂರು ಮತ್ತು ಮಂಜುನಾಥ್ ಸಿದ್ದಾಪುರ ಅವರುಗಳು ಮಾತನಾಡಿ, ಕ್ರೀಡಾಕೂಟ ಆಯೋಜನೆಗೆ ಸಂತಸ ವ್ಯಕ್ತಪಡಿಸಿದರು. ನಾಯ್ಡುಸ್ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷರಾದ ಟಿ.ಜಿ.ಹರ್ಷ, ಜಲಿಜ ಸಮಾಜದ ಪ್ರಮುಖರಾದ ಗಣೇಶ್, ಶ್ರೀನಿವಾಸ್ ನಾಪೋಕ್ಲು, ವಿಜಯ ಕುಮಾರ್ ಸಿದ್ದಾಪುರ, ದೇವಯ್ಯ, ಕಾವೇರಪ್ಪ ಪೆರುಂಬಾಡಿ ನವನೀತ್ ಕುಶಾಲನಗರ ಉಪಸ್ಥಿತರಿದ್ದರು. ಸ್ಪೋಟ್ರ್ಸ್ ಕ್ಲಬ್ ಉಪಾಧ್ಯ್ಯಕ್ಷರಾದ ಟಿ.ಜಿ. ಹರ್ಷ ಸ್ವಾಗತಿಸಿ ವಂದಿಸಿದರು. ಪ್ಯಾಂಥರ್ಸ್‍ಗೆ ಪ್ರಶಸ್ತಿ :: ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಆರ್.ಸಿ.ಬಿ. ಬೈಲುಕುಪ್ಪೆ ತಂದ ವಿರುದ್ಧ ಪೆರುಂಬಾಂಡಿ ಫ್ಯಾಂಥರ್ಸ್ ತಂಡ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ವರದಿ : ಕಿಶೋರ್ ಕುಮಾರ್ ಶೆಟ್ಟಿ









