
ಮಡಿಕೇರಿ NEWS DES ಮೇ 18 : ಮಡಿಕೇರಿಯ ಶ್ರೀಕೋಟೆ ಮಹಾಗಣಪತಿ ದೇವಾಲಯದಲ್ಲಿ ಮೇ 21 ಮತ್ತು 22 ರಂದು ಚಿನ್ನದ ಕಿರೀಟ ಸಮರ್ಪಣೆ ವಾರ್ಷಿಕೋತ್ಸವ ನಡೆಯಲಿದೆ ಎಂದು ಶ್ರೀಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಅಧ್ಯಕ್ಷ ಬಿ.ವಿ.ಅರವಿಂದ್ ಮೇ 21 ರಂದು ಸಂಜೆ 6 ಗಂಟೆಗೆ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಭಜನೆ, ವಿಶೇಷ ಪೂಜೆ ನಡೆಯಲಿದ್ದು, ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ ಎಂದು ಹೇಳಿದ್ದಾರೆ. ಮೇ 22 ರಂದು ಮುಂಜಾನೆ ಶ್ರೀಕೋಟೆ ಮಹಾಗಣಪತಿ ದೇವರಿಗೆ ಅಭಿಷೇಕ, 21 ತೆಂಗಿನಕಾಯಿಗಳ ಗಣ ಹೋಮ, 10 ಸಹಸ್ರ ದುರ್ವಾಂಕುರ, ಒಂದು ಸಹಸ್ರ ಎಕ್ಕ ಸಮರ್ಪಣೆ ಮತ್ತು ಪೂರ್ಣಾಹುತಿ ಜರುಗಲಿದ್ದು, ಮಹಾಮಂಗಳಾರತಿಯ ನಂತರ ಭಕ್ತರಿಗೆ ಅನ್ನ ಸಂತರ್ಪಣೆಯಾಗಲಿದೆ. ಪೂಜಾ ಕಾರ್ಯಕ್ರಮಕ್ಕೆ ತನು ಮನ ಧನ ಸಹಾಯ ಮಾಡುವವರು ಹಾಗೂ ಅನ್ನ ಸಂತರ್ಪಣೆಗೆ ಸಾಮಾಗ್ರಿ ನೀಡುವವರು ಎಸ್.ಎ.ವಿನಾಯಕ್ (9986498466) ನ್ನು ಸಂಪರ್ಕಿಸಬಹುದೆಂದು ಬಿ.ವಿ.ಅರವಿಂದ್ ತಿಳಿಸಿದ್ದಾರೆ.








