
ವಿರಾಜಪೇಟೆ ಮೇ 20 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್ ವಿರಾಜಪೇಟೆ ತಾಲೂಕು, ವತಿಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಹುದಿಕೇರಿ ಶ್ರೀ ಮಹಾದೇವರ ಪೆಗ್ಗೆರೆ ಕೆರೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿತು. ಗುದ್ದಲಿ ಪೂಜೆ ಬಳಿಕ ಮಾತನಾಡಿದ ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿವ್ಯ ಕಾವೇರಮ್ಮ, ಕೆರೆ ಅಭಿವೃದ್ಧಿಯಿಂದ ಸುತ್ತಮುತ್ತ ಇರುವ ಕೃಷಿಕರಿಗೆ, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಮತ್ತು ಊರಿನ ವಾತಾವರಣ ಸುಂದರವಾಗಿರುತ್ತದೆ ಎಂದು ಹೇಳಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಅರುಣ್ ಬಾನಂಗಡ, ತಾಲೂಕಿನ ಯೋಜನಾಧಿಕಾರಿ ಪಿ.ಹರೀಶ್, ಚೀಪ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ರೋಶನ್ ಅಪ್ಪಚ್ಚು, ಕೆರೆ ಸಮಿತಿ ಅಧ್ಯಕ್ಷ ಕರುಂಬಯ್ಯ, ಪಂಚಾಯತ್ ಸದಸ್ಯರಾದ ಶಿಲ್ಪ, ಶೆಟ್ಟಿಗೇರಿ ಒಕ್ಕೂಟದ ಅಧ್ಯಕ್ಷ ಸುಶೀಲ, ದೇವಸ್ಥಾನದ ಅರ್ಚಕ ಗುರುರಾಜ್, ವಲಯ ಮೇಲ್ವಿಚಾರಕ ನಾಗರಾಜ್, ಕೃಷಿ ಮೇಲ್ವಿಚಾರಕ ವಸಂತ್, ಸೇವಾ ಪ್ರತಿನಿಧಿ ಶಾಲಿನಿ, ಜಾಕೀರ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು, ಊರಿನ ಗ್ರಾಮಸ್ಥರು, ಕೆರೆ ಸಮಿತಿಯವರು, ದೇವಸ್ಥಾನ ಸಮಿತಿಯವರು ಹಾಜರಿದ್ದರು.









