
ಮಡಿಕೇರಿ ಆ.4 NEWS DESK : ಮಂಡ್ಯ ಜಿಲ್ಲೆಯ ರಾಜ್ಯ ಮಟ್ಟದ ಕನ್ನಡ ಮಾಸ ಪತ್ರಿಕೆ ಜೀವನಾಡಿ ಪತ್ರಿಕೆಯು ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸ್ಪರ್ಧೆ 2026 ಏರ್ಪಡಿಸಿದ್ದು ರಾಜ್ಯ ಮಟ್ಟದ ಜೀವನಾಡಿ ಕನ್ನಡ ಕಥಾ ಸ್ಪರ್ಧೆ, ಕನ್ನಡ ಪ್ರಬಂಧ ಸ್ಪರ್ಧೆ ಮತ್ತು ಕನ್ನಡ ಕವನ ಸ್ಪರ್ಧೆ ಏರ್ಪಡಿಸಿದೆ. ಕಥೆ ಪ್ರಬಂಧ ಕವಿತೆಗಳು ಸ್ವ ರಚನೆಯಾಗಿದ್ದು ಬೇರೆಲ್ಲೂ ಪ್ರಕಟವಾಗಿರಬಾರದು. ಕಥೆ 2,500 ಪದಗಳಿಗೆ ಮೀರಬಾರದು ಪ್ರಬಂಧ 2 ಸಾವಿರ ಪದಗಳಿಗೆ ಮೀರಿರಬಾರದು, ಕವಿತೆ 24 ಸಾಲುಗಳನ್ನು ಮೀರಿರಬಾರದು. ಅನುವಾದಿತ ಕಥೆ ಪ್ರಬಂಧ ಕವಿತೆಗಳಿಗೆ ಅವಕಾಶವಿಲ್ಲ. ಆಗಸ್ಟ್ 15 ರೊಳಗೆ ಜೀವನಾಡಿ ಮಾಸಪತ್ರಿಕೆ, ನಂ3, “ಚೈತ್ರ”, ಚಾಲುಕ್ಯರಸ್ತೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಕಿರಗಂದೂರು, ಮಂಡ್ಯ. ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ ಡಾ. ಎಚ್.ಎಸ್ ಮುದ್ದೇಗೌಡ 98451 98098 ಅಥವಾ ಎಂ.ಪಿ ಕೇಶವ ಕಾಮತ್ 94483 46276 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.









