
ಮಡಿಕೇರಿ ಮೇ 21 NEWS DESK : ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗಮಂಡಲದ ಮಿಲನ ಭರತ್ ಭರತನಾಟ್ಯ, ಕೂಚುಪುಡಿ ಮತ್ತು ಒಡಿಸ್ಸಿ ನೃತ್ಯ ಪ್ರಕಾರಗಳಲ್ಲಿ ಸ್ಪರ್ಧಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗುರು ವಿದ್ವಾನ್ ರಾಜೇಶ್ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ನೃತ್ಯಭ್ಯಾಸ ಮಾಡಿದ್ದು, ವಸ್ತ್ರ ವಿನ್ಯಾಸವನ್ನು ವಿದುಷಿ ಕಾವ್ಯಶ್ರೀ ಕಪಿಲ್ ಮಾಡಿದ್ದಾರೆ.









