
ನಾಪೋಕ್ಲು ಮೇ 22 NEWS DESK : ಹೋಬಳಿ ವ್ಯಾಪ್ತಿಯಲ್ಲಿ ನಿತ್ಯ ಮಳೆಯಾಗುತ್ತಿದ್ದು, ರೈತರು ಬಿರುಸಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿತ್ಯ ಮಳೆಯಾಗುತ್ತಿರುವುದರಿಂದ ನದಿ ತೋಡುಗಳಲ್ಲಿ ನೀರಿನ ಪ್ರಮಾಣ ಏರಿಕೆ ಯಾಗಿದೆ. ತೋಟಗಳಲ್ಲಿ ತೇವಾಂಶವಿದ್ದು, ರೈತರು ರಾಸಾಯನಿಕ ಗೊಬ್ಬರಗಳನ್ನು ಕಾಫಿ ತೋಟಗಳಿಗೆ ಹಾಕುತ್ತಿದ್ದಾರೆ. ಅಲ್ಲಲ್ಲಿ ಭತ್ತದ ಬಿತ್ತನೆಗೆ ಸಿದ್ಧತೆಗಳಾಗುತ್ತಿವೆ ಸಮೀಪದ ಕುಯ್ಯಂಗೇರಿ ಗ್ರಾಮದಲ್ಲಿ ಗದ್ದೆ ಉಳುಮೆಗೆ ತೊಡಗಿರುವ ದೃಶ್ಯ ಕಂಡು ಬಂತು. ಕೃಷಿಕರಾದ ಕುಯ್ಯಂಗೇರಿಯ ಚಿಲ್ಲನ ಕುಮಾರಪ್ಪ ಮಾತನಾಡಿ, ಇತ್ತೀಚಿನ ಮಳೆಯಿಂದಾಗಿ ಭೂಮಿ ಹದಗೊಂಡಿದೆ. ಉಳುಮೆಗೆ ಇದು ಸಕಾಲ ಈಗ ಉಳುಮೆ ಮಾಡುವುದರಿಂದ ಹುಲ್ಲು ಹಾಗೂ ಕಳೆ ಗಿಡಗಳು ನಾಶವಾಗಿ ಬಿತ್ತನೆ ಮಾಡಲು ಅನುಕೂಲವಾಗಲಿದೆ ಎಂದು ಹಳೆಯ ಸಾಂಪ್ರದಾಯಿಕ ಪದ್ಧತಿಯಂತೆ ಸಾವಯವ ಗೊಬ್ಬರ ಹಾಗೂ ಧನಗಳನ್ನು ಬಳಸಿ ಬೇಸಾಯ ಮಾಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ವರದಿ : ದುಗ್ಗಳ ಸದಾನಂದ.









