
ಮಡಿಕೇರಿ ಜು.2 NEWS DESK : ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಅಡಿ ಇಟ್ಟಿರುವ “ರೆಮ್ಸೆಸ್ ಮೋಷನ್ ಪಿಕ್ಚರ್ಸ್” ಸಂಸ್ಥೆ ವತಿಯಿಂದ ಪ್ರತಿಭಾವಂತ ನಟ, ನಟಿಯರ ಆಯ್ಕೆ ಪ್ರಕ್ರಿಯೆ ಜು.11ರಂದು ಬೈಲುಕುಪ್ಪೆಯಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಪ್ರಮುಖರು, ಚಿತ್ರ ನಿರ್ದೇಶಕರು ಹಾಗೂ ನಟರೂ ಆಗಿರುವ ರುಹಾನ್ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯ ಗಣಪತಿ ದೇವಸ್ಥಾನ ಸಮೀಪದ ಎಸ್‍ಎಲ್‍ವಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಉದ್ದೇಶಿತ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಅಗತ್ಯವಾದ ನಟ, ನಟಿಯರ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು. ಕೊಡಗು ಸೇರಿದಂತೆ ಕೊಡಗಿನ ಸುತ್ತಮುತ್ತಲ ಜಿಲ್ಲೆ ತಾಲ್ಲೂಕುಗಳ 10 ವರ್ಷದಿಂದ 60 ವರ್ಷ ಮಯೋಮಿಯವರೆಗಿನ ಆಸಕ್ತ ಕಲಾವಿದರು ಪಾಲ್ಗೊಳ್ಳಬಹುದಾಗಿದೆ. ಸ್ಥಳೀಯ ಪ್ರತಿಭೆಗಳಿಗೆ ವೃತ್ತಿಪರ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶ ಕಲ್ಪಿಸುವುದು ಈ ಆಯ್ಕೆ ಪ್ರಕ್ರಿಯೆಯ ಉದ್ದೇಶವೆಂದು ಸ್ಪಷ್ಟಪಡಿಸಿದರು. ಚಿತ್ರೀಕರಣವನ್ನು ಕೊಡಗು ಸೇರಿದಂತೆ ವಿವಿಧೆಡೆಗಳಲ್ಲಿ ನಡೆಸಲಾಗುವುದು. ಸ್ಥಳೀಯ ಆಸಕ್ತ ಕಲಾವಿದರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಹಾಯಕ ನಿರ್ದೇಶಕ ಪಿಂಟು ಕುಮಾರ್ ಠಾಕೂರ್ ಹಾಗೂ ಸಂಸ್ಥೆಯ ಪ್ರಮುಖ ಯೋಗಿ ಹೊನ್ನಾವರ ಉಪಸ್ಥಿತರಿದ್ದರು.









