
ನಾಪೋಕ್ಲು ಮೇ 23 NEWS DESK : ಬೇತು ಗ್ರಾಮದ ಚೆರಿಯಪರಂಬುವಿನಿಂದ ಕಕ್ಕುಂದ ಕಾಡು ಶ್ರೀ ವೆಂಕಟೇಶ್ವರ ದೇವಾಲಯ ಸಂಪರ್ಕ ಕಾಂಕ್ರೀಟ್ ರಸ್ತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮಸ್ಥರ ಬೇಡಿಕೆಯಂತೆ ಶಾಸಕರ ಅನುದಾನ ರೂ.15 ಲಕ್ಷದಲ್ಲಿ ಬಾಳೆಯಡ ಕುಟುಂಬಸ್ಥರ ಮನೆಗಾಗಿ ಶ್ರೀ ವೆಂಕಟೇಶ್ವರ ದೇವಾಲಯ ರಸ್ತೆಗೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದರಿಂದ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ಗ್ರಾಮಸ್ಥರ ಪರವಾಗಿ ಶಾಸಕರಿಗೆ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಂಗಂಡ ಶಶಿ ಮಂದಣ್ಣ, ಕೆಡಿಪಿ ಸದಸ್ಯ ಕಲಿಯಂಡ ಕೌಶಿ ಕುಶಾಲಪ್ಪ, ಕಾಂಗ್ರೆಸ್ ವಲಯ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ, ಗ್ರಾಮಸ್ಥರಾದ ಅಪ್ಪಸ್ವಾಮಿ, ಅಬ್ದುಲ್ಲ, ಶಾಫಿ, ಅಣ್ಣಯ್ಯ, ಬಾಲೆಯಡ ಪ್ರಿಯ, ಇನ್ನಿತರರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









