
ನಾಪೋಕ್ಲು ಮೇ 26 NEWS DESK : ಪಾಲೂರು ಗ್ರಾಮದೇವತೆಯಾದ ಶ್ರೀ ಕಾಳಿಕಾಂಬ ಅಮನೂರು ತಾಯಿಯ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ದೇವರ ಜಳಕ ನಡೆಯಿತು. ಬಳಿಕ ವಾದ್ಯಗೋಷ್ಠಿಯೊಂದಿಗೆ ದೇವರ ಅಲಂಕೃತ ಮೂರ್ತಿಯೊಂದಿಗೆ ತಿರುವಳಕಾರರು ಭಕ್ತರು ಮೆರವಣಿಗೆ ತೆರಳಿ ದೇವಾಲಯದಲ್ಲಿ ದೇವರಿಗೆ ಮಹಾಪೂಜೆ ನೆರವೇರಿತು. ನಂತರ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವದಲ್ಲಿ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಚೆರುವಾಳಂಡ ರಮೇಶ್, ಕಾರ್ಯದರ್ಶಿ ಎಡಿಕೇರಿ ಪ್ರವೀಣ್ (ಪವಿ), ನಿರ್ದೇಶಕರು, ಸದಸ್ಯರು ಹಾಗೂ ತಕ್ಕ ಮುಖ್ಯಸ್ಥರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









