ಮಡಿಕೇರಿ NEWS DESK ಮೇ 27 : ಗಾಂಜಾ ಸರಬರಾಜು ಮಾಡುತ್ತಿದ್ದ ಅಸ್ಸಾಂ ಮೂಲದ ಆರೋಪಿಯನ್ನು ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ರಾಜ್ಯ ಮೂಲದ ಅಪ್ಪಶೆಟ್ಟಳ್ಳಿ ಗ್ರಾಮದ ನಿವಾಸಿ ಮೈನುಲ್ ಹಕ್ (30) ಬಂಧಿತ ಆರೋಪಿಯಾಗಿದ್ದು, 1 ಕೆ.ಜಿ 20 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಶನಿವಾರಸಂತೆಯ ಮಾರುಕಟ್ಟೆ ಬಳಿ ಅಕ್ರಮವಾಗಿ ಗಾಂಜಾ ಸರಬರಾಜು ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದರು.
ಸೋಮವಾರಪೇಟೆ ಡಿವೈಎಸ್‌ಪಿ ಪಿ.ಚಂದ್ರಶೇಖರ್, ಶನಿವಾರಸಂತೆ ಠಾಣೆ ಪಿಐ ಕೃಷ್ಣರಾಜು, ಪಿಎಸ್‌ಐ ಚಂದ್ರು ಹೆಚ್.ವೈ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.










