
ಸೋಮವಾರಪೇಟೆ NEWS DESK ಮೇ 29 : ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಗುರುವಾರ ಬೆಳಗ್ಗಿನಿಂದ ಮಳೆಯ ಆರ್ಭಟ ಕಡಿಮೆಯಾಗಿತ್ತು. ಸೆಸ್ಕ್ ಮತ್ತು ಅರಣ್ಯ ಇಲಾಖೆಯವರು ಬಿದ್ದ ಮರಗಳನ್ನು ತೆರವು ಮಾಡುವ ಕೆಲಸದಲ್ಲಿ ತೊಡಗಿದರು.
ವಿದ್ಯುತ್ ಮಾರ್ಗದ ಮೇಲೆ ಬಿದ್ದ ಮರಗಳನ್ನು ಸೆಸ್ಕ್ ಸಿಬ್ಬಂದಿಗಳು ತೆಗೆದು, ಅನೇಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು, ರಸ್ತೆಯತ್ತ ವಾಲಿದ್ದ ಮರಗಳನ್ನು ತೆರವುಗೊಳಿಸಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗುರುವಾರ ಬೆಳಿಗ್ಗೆ 8 ಗಂಟೆಯವರೆಗೆ ಶಾಂತಳ್ಳಿ ಹೋಬಳಿಯಲ್ಲಿ 84 ಮಿಲಿ ಮೀಟರ್, ಸೋಮವಾರಪೇಟೆ ಕಸಬ 68, ಶನಿವಾರಸಂತೆ 50 ಹಾಗೂ ಕೊಡ್ಲಿಪೇಟೆ 24 ಮಿಲಿ ಮೀಟರ್ ಮಳೆಯಾಗಿದೆ.








