
ನಾಪೋಕ್ಲು ಜೂ.3 NEWS DESK : ಮರಂದೋಡ ಗ್ರಾಮದ ಶ್ರೀ ಕೇಕುಮನಿ ಭಗವತಿ ದೇವಾಲಯಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಕ್ಷೇತ್ರದ ಭಗವತಿ ದೇವರಲ್ಲಿ ಪ್ರಾರ್ಥಿಸಿದ ಶಾಸಕರು, ಕ್ಷೇತ್ರದ ಅಭಿವೃದ್ಧಿ ಹಾಗೂ ಈ ಬಾರಿಯ ಮಳೆಗಾಲವು ಸುಸೂತ್ರವಾಗಿ ಯಾವುದೇ ಹಾನಿಯನ್ನುಂಟುಮಾಡದೆ ಜನರ ಬಾಳಿಗೆ ಸುಖ-ಶಾಂತಿಯನ್ನು ನೀಡಲಿ ಎಂದು ಪೂಜೆ ಸಲ್ಲಿಸಿದರು. ಈ ಸಂದರ್ಭ ಚುನಾಯಿತ ಪ್ರತಿನಿಧಿಗಳು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಮರೊಂದೊಡ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ 8 ಲಕ್ಷ ಮೊತ್ತದ ರಸ್ತೆಯನ್ನು ಇದೇ ಸಂದರ್ಭ ಶಾಸಕರು ಉದ್ಘಾಟಿಸಿದರು.
ವರದಿ : ದುಗ್ಗಳ ಸದಾನಂದ.









