
ಮಡಿಕೇರಿ ಜೂ.3 NEWS DESK : ತಾಲ್ಲೂಕಿನ ಸಾಮಾಜಿಕ ಅರಣ್ಯ ವಲಯದ ಹೊದ್ದೂರು ವಾಟೆಕಾಡು ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ 2025-26 ನೇ ಸಾಲಿನ ಮಳೆಗಾಲದಲ್ಲಿ ನೆಡಲು ವಿವಿಧ ಹಣ್ಣಿನ, ಔಷಧೀಯ ಹಾಗೂ ಕಾಡು ಜಾತಿಯ ಸಸಿ ಬೆಳೆಸಲಾಗಿದೆ. ಮಹಾಗನಿ, ಸಿಲ್ವರ್, ನೇರಳೆ, ಹಲಸು, ನಿಂಬೆ, ನೆಲ್ಲಿ, ಸಂಪಿಗೆ, ಕಾಡು ಬಾದಾಮಿ, ಲಾವಂಚ, ಮಾವು, ಹೆಬ್ಬಲಸು, ಸೀಬೆ, ತೇಗ, ಹೊನ್ನೆ, ಬಟರ್ ಪ್ರೂಟ್, ಬೀಟೆ, ಹಿಪ್ಪೆ, ಸಿಮಾರೂಬಾ, ಮುಂತಾದ ಸಸಿಗಳು ಲಭ್ಯವಿದ್ದು, ರೈತ ಫಲಾನುಭವಿಗಳಿಗೆ ಸರ್ಕಾರದ ಹೊಸ ಪರಿಷ್ಕೃತ ಆದೇಶದಂತೆ ರೂ.6 ಪ್ರತಿ ಸಸಿಗೆ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬಹುದು. ರೈತರು ತಮ್ಮ ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್‍ಬುಕ್ ಪ್ರತಿ, ತಮ್ಮ ಜಮೀನಿನ ಆರ್‍ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿ 9482915684, 9164698938, ಗಸ್ತು ಅರಣ್ಯ ಪಾಲಕರು-9632995904, 9980434942 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಸೋಮವಾರಪೇಟೆ :: ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದಲ್ಲಿನ ಹುದುಗೂರು ಮತ್ತು ಹೊಸಹಳ್ಳಿ ಇಲಾಖಾ ಸಸ್ಯಕ್ಷೇತ್ರದಲ್ಲಿ ಮಹಾಗನಿ, ಅಗಸೆ, ಸೀಬೆ, ಲೆಮನ್ ಗ್ರಾಸ್, ಬಜೆ, ಪಾರಿಜಾತ, ನೆಲ್ಲಿ, ಹಲಸು, ನೇರಳೆ, ಸಿಲ್ವರ್ ಲಾವಂಚ, ರಾಮಫಲ, ಶ್ರೀಗಂಧ, ಲಿಂಬು, ಕಹಿ ಹುಳಿ, ಹೊಂಗೆ, ಬಾದಾಮಿ ಮುಂತಾದ ಗಿಡಗಳಿದ್ದು, 6*9 ಅಳತೆಯ ಗಿಡ ಒಂದಕ್ಕೆ ರೂ.3 ರಂತೆ ಹಾಗೂ 8*12 ಅಳತೆಯ ಗಿಡ ಒಂದಕ್ಕೆ ರೂ.6 ರಂತೆ ವಿವಿಧ ರೀತಿಯ ಗಿಡ ವಿತರಣಾ ಕಾರ್ಯವು ಜೂನ್, 05 ರಿಂದ ಪ್ರಾರಂಭಿಸಲಾಗುತ್ತದೆ. ಆಸಕ್ತ ಫಲಾನುಭವಿಗಳು ಅರ್ಜಿ, ಆರ್‍ಟಿಸಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ಪ್ರತಿ, ರೇಷನ್ ಕಾರ್ಡ್ ಪ್ರತಿ, ಪಾಸ್‍ಪೋರ್ಟ್ ಸೈಜ್ ಪೋಟೋ ದಾಖಲಾತಿಗಳನ್ನು ನೀಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ವಲಯ ಅರಣ್ಯಾಧಿಕಾರಿ (ಪ್ರ: 9164303717, ಉಪ ವಲಯ ಅರಣ್ಯಾಧಿಕಾರಿ(ಹರೀಶ್ ಕುಮಾರ ಎನ್.ಬಿ.) 9449186823, ಗಸ್ತು ಅರಣ್ಯ ಪಾಲಕರು (ಅನಿಲ್ ಕುಮಾರ್ ಕೆ.ಬಿ.) 9482108007, ಹಾಗೂ ಗಸ್ತು ಅರಣ್ಯ ಪಾಲಕರು(ಸೋಮಶೇಖರ ನೀಲಕಂಠ ಉಪ್ಪಾರ) 7026469099 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.









