
ನಾಪೋಕ್ಲು ಜೂ.4 NEWS DESK : ಕನ್ನಡದ ಖ್ಯಾತ ಕವಿ, ಸಾಹಿತಿ ಹೆಚ್.ಎಸ್.ವಿ ಎಂದೇ ಮನೆಮಾತಾಗಿದ್ದ ತೂಗು ಮಂಚದ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚೇರಂಬಾಣೆ ಗೌಡ ಸಮಾಜದಲ್ಲಿ ನಡೆದ ಒಕ್ಕೂಟದ ಮಾಸಿಕ ಸಭೆಯಲ್ಲಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿಸ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಒಕ್ಕೂಟದ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಅಗಲಿದ ಅಮೂಲ್ಯ ಚೇತನಗಳ ಪರಿಚಯ ಸಾಧನೆ ಗಳನ್ನು ಮೆಲುಕು ಹಾಕಿದಂತಾಗುತ್ತದೆ ಹಾಗೂ ಅವರ ಬದುಕು ಬರಹಗಳಿಗೆ ಗೌರವ ನೀಡಿದಂತಾಗುತ್ತದೆ ಎಂದು ತುಳಸಿ ಮೋಹನ್ ಹೇಳಿದರು. ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲ ಅಪ್ಪಾಜಿ ಸೇರಿದಂತೆ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿದ್ದರು. ಹೆಚ್.ಎಸ್.ವಿ ಅವರ ಭಾವಗೀತೆಗಳನ್ನು ಕೇಕಡ ಪೂಜಾ ನಾಗೇಂದ್ರ, ಬೈಮನ ಜ್ಯೋತಿ ತಿಮ್ಮಯ್ಯ ಹಾಡಿದರು. ಕೂಡಕಂಡಿ ಸೋನಿ ಸುದೀಪ್ ಕವನ ವಾಚಿಸಿದರು.
ವರದಿ : ದುಗ್ಗಳ ಸದಾನಂದ.










