
ಕುಶಾಲನಗರ ಜೂ.7 NEWS DESK : ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕುಶಾಲನಗರದ ಪ್ರಮುಖ ಮಸೀದಿಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕುಶಾಲನಗರದ ಶಾಫಿ ಹಾಗೂ ಹನಫಿ ಬಾಂಧವರು ಮದೀಸಿಗಳಲ್ಲಿ ಬಕ್ರೀದ್ ನ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ನಾಡಿನಲ್ಲಿ ಸರ್ವ ಸಮುದಾಯದವರು ಶಾಂತಿ, ಸಮಾಧಾನದಿಂದಿರಲು ಹಾಗೂ ಬೆಳೆ, ಮಳೆಯಾಗಲು ಪ್ರಾರ್ಥಿಸಿದರು. ನಂತರ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಸಹೋದರತೆಯ ಸಂದೇಶವನ್ನು ಸಾರಿದರು. ಈ ಸಂದರ್ಭ ಹಿಲಾಲ್ ಮಸೀದಿಯ ಧರ್ಮಗಳು, ದಾರುಲ್ ಉಲೂಂ ಮದ್ರಸ ಪ್ರಾಂಶುಪಾಲ ತಮ್ಲೀಕ್ ದಾರಿಮಿ, ಅಧ್ಯಕ್ಷ ಹುಸೇನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಬಕ್ರೀದ್ ಹಬ್ಬದ ಹಿನ್ನಲೆ ಬಗ್ಗೆ ವಿವರಿಸಿದರು. ಕುಶಾಲನಗರದ ಹಿಲಾಲ್ ಮಸೀದಿ, ಜಾಮಿಯಾ ಮಸೀದಿ, ನೂರೇ ಮದೀನ, ಕೂಡಿಗೆ, ನಂಜರಾಯಪಟ್ಟ ಸೇರಿದಂತೆ ಸಮೀಪದ ಮಸೀದಿಗಳಲ್ಲಿ ಬಕ್ರೀದ್ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಆಯಾ ಭಾಗದ ಕಮಿಟಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.









