
ಮಡಿಕೇರಿ ಜೂ.7 NEWS DESK : ಸಂಪಾಜೆ ಗ್ರಾಮದ ಪೇರಡ್ಕ-ಗೂನಡ್ಕ ಮೊಹಿಯುದ್ದಿನ್ ಜುಮ ಮಸ್ಜಿದ್ ನಲ್ಲಿ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಖತೀಬ್ ನಹೀಮ್ ಫೈಜಿ ಅಲ್ ಮಹಬರಿ ಈದ್ ಸಂದೇಶ ನೀಡಿದರು. ಎಲ್ಲಾ ಸಮುದಾಯದವರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಲು ಕರೆ ನೀಡಿದರು. ನಂತರ ಎಲ್ಲರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಖಬರಸ್ಥಾನದಲ್ಲಿ ಮೃತಪಟ್ಟವರಿಗೆ ಪೇರಡ್ಕ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರೆವೇರಿಸಿದರು. ಪೇರಡ್ಕ-ಗೂನಡ್ಕ ಜಮಅತ್ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಜಮಾತ್ ಉಪಾಧ್ಯಕ್ಷ ಟಿ.ಬಿ.ಹನೀಫ್ ತೆಕ್ಕಿಲ್ ಗೂನಡ್ಕ, ಕಾರ್ಯದರ್ಶಿ ಪಿ.ಕೆ.ಉಮ್ಮರ್ ಜಡ್ಜ್ ಗೂನಡ್ಕ, ಜೊತೆ ಕಾರ್ಯದರ್ಶಿ ಸಿನಾನ್ ಜಡ್ಜ್ ಗೂನಡ್ಕ, ಸದಸ್ಯರುಗಳಾದ ಮೊಯಿದು ದರ್ಕಾಸ್ ಗೂನಡ್ಕ,ಇಬ್ರಾಹಿಂ ಸೆಟ್ಯಡ್ಕ, ಬಾತಿಶ ತೆಕ್ಕಿಲ್ ಸೇಟ್ಯಡ್ಕ, ಉಸ್ಮಾನ್ ಪಾಂಡಿ ಗೂನಡ್ಕ, ಖಜಾಂಚಿ ತೆಕ್ಕಿಲ್ ಮೊಹಮದ್ ಕುಂಞಿ ಪೇರಡ್ಕ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ ದರ್ಕಾಸ್ ಹಾಜರಿದ್ದರು.









