
ನಾಪೋಕ್ಲು ಜೂ.9 NEWS DESK : ದಕ್ಷಿಣ ಕನ್ನಡ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ ಲಯನ್ಸ್ ಜಿಲ್ಲಾ 317 ಡಿ ಯ ಅಧೀನದಲ್ಲಿ ಬರುವ ರೆವಿನ್ಯೂ ಜಿಲ್ಲೆಯ ನೂತನ ರಾಜ್ಯಪಾಲ ಲಯನ್ ಅರವಿಂದ ಶೆನ್ನೈ ಅವರ ನಾಯಕತ್ವದಲ್ಲಿ ಕೊಡಗು ಜಿಲ್ಲಾ ಪ್ರಾಂತೀಯ ಅಧ್ಯಕ್ಷರಾಗಿ ನಾಪೋಕ್ಲು ಲಯನ್ಸ್ ಕ್ಲಬ್‍ನ ಡಾ.ಕೋಟೆರ ಸಿ.ಪಂಚಮ್ ತಿಮ್ಮಯ್ಯ ಅವರನ್ನು ನೇಮಕ ಮಾಡಲಾಗಿದೆ. ಕೊಡಗು ಪ್ರಾಂತ್ಯದಲ್ಲಿ 12 ಲಯನ್ಸ್ ಸಂಸ್ಥೆಗಳಿದ್ದು, ಜೂನ್ ತಿಂಗಳಿಂದ ಒಂದು ವರ್ಷದ ಅವಧಿಗೆ ಇವರು ಅಧಿಕಾರದಲ್ಲಿರುತ್ತಾರೆ. ಇವರ ಅಧೀನದಲ್ಲಿ ಮೂವರು ವಲಯ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಮಡಿಕೇರಿಯ ಲಯನ್ಸ್ ಕ್ಲಬ್ ವತಿಯಿಂದ ನಟರಾಜ ಕೆಸ್ತೂರ್, ಗೋಣಿಕೊಪ್ಪ ಲಯನ್ಸ್ ಕ್ಲಬ್ಬಿನ ಚಿಟ್ಟಿಮಾಡ ಅಪ್ಪಣ್ಣ, ಮೂರ್ನಾಡು ಲಯನ್ಸ್ ಕ್ಲಬ್ಬಿನ ಬಡುವಂಡ ಬಿಂದು ಗಣಪತಿ ಆಯ್ಕೆಯಾಗಿದ್ದಾರೆ. ಇವರು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರವನ್ನು ವಹಿಸಿಕೊಂಡರು ಈ ಸಂದರ್ಭ ವಲಯ್ಯಾಧ್ಯಕ್ಷ ಬಡುವಂಡ ಬಿಂದು ಗಣಪತಿ, ನಟರಾಜ ಕೆಸ್ತೂರ್, ಚಿಟ್ಟಿಮಾಡ ಅಪ್ಪಣ್ಣ, ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









