
ಸೋಮವಾರಪೇಟೆ ಜೂ.10 NEWS DESK : ಸೋಮವಾರಪೇಟೆ ತಾಲೂಕಿನ ಮಸಗೋಡು ಗ್ರಾಮದ ಸಮುದಾಯ ಭವನ ಅಭಿವೃದ್ಧಿಗೆ ಕ್ಷೇತ್ರದಿಂದ ಮಂಜೂರಾದ 50,000 ಮೊತ್ತದ ಡಿ ಡಿ ಮಂಜೂರಾತಿ ಪತ್ರವನ್ನು ಕೊಡಗು ಜಿಲ್ಲಾ ನಿರ್ದೇಶಕಿ ಶ್ರೀಮತಿ ಲೀಲಾವತಿರವರು ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ಹನುಮಂತಪ್ಪ ಅಂಗಡಿ ಆಡಳಿತ ಮಂಡಳಿಯ ಅದ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಜಿಲ್ಲಾ ನಿರ್ದೇಶಕರು ಮಾತನಾಡಿ, ಕ್ಷೇತ್ರದಿಂದ ಪೂಜ್ಯರು ಧರ್ಮೋತ್ಥಾನ ಟ್ರಸ್ಟ್‌ಗಳನ್ನು ಮಾಡಿ ಸಮಾಜಮುಖಿಯಾಗಿ ರಾಜ್ಯಾದ್ಯಂತ ದೇವಸ್ಥಾನ, ಸಮುದಾಯಭವನ ಹಾಗೂ ಹಾಲು ಉತ್ಪಾದಕರ ಘಟಕಗಳ ಅಭಿವೃದ್ಧಿಗಾಗಿ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ ಎಂದು ಕೇತ್ರದ ಹತ್ತು ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಗ್ರಾಮ ಸಮಿತಿಯ ಅದ್ಯಕ್ಷ ಸತೀಶ್, ಜಿಲ್ಲಾ ಜನಜಾಗೃತಿ ಸದಸ್ಯ ಸುರೇಶ್ , ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಜಲದಿನೇಶ್, ಒಕ್ಕೂಟ ಅದ್ಯಕ್ಷರಾದ ರೂಪಾ ಸುರೇಶ್ ಹಾಗೂ ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಯವರು ಹಾಜರಿದ್ದರು.









