ಮಡಿಕೇರಿ NEWS DESK ಜೂ.13 : ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಈರಳೆವಳಮುಡಿಯ ಸೂದನ ಧನ್ಯಶ್ರೀ ಎಸ್.ಜಿ ನಾಲ್ಕು ಚಿನ್ನದ ಪದಕ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಧನ್ಯಶ್ರೀ ಎಸ್.ಜಿ ಅವರಿಗೆ ರಾಜ್ಯಪಾಲರಾದ ಥಾವರಚಂದ್ ಗೆಲ್ಹೋಟ್ ಅವರು ಪದಕ ಪ್ರದಾನ ಮಾಡಿ ಶುಭ ಹಾರೈಸಿದರು. ನಾಲ್ಕು ಚಿನ್ನದ ಪದಕಗಳನ್ನು ಪಡೆದ ಕುರಿತು ಸೂದನ ಧನ್ಯಶ್ರೀ ಹರ್ಷ ವ್ಯಕ್ತಪಡಿಸಿದರು.










