ನಾಪೋಕ್ಲು ಜೂ.16 NEWS DESK : ಕೊಳಕೇರಿ ಗ್ರಾಮದ ಶ್ರೀ ಅಮ್ಮನೂರು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಹಾಯಧನ ಹಸ್ತಾಂತರಿಸಲಾಯಿತು. ಸಮೀಪದ ಕೊಳಕೇರಿಯ ಶ್ರೀ ಅಮ್ಮನೂರು ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು 50 ಸಾವಿರ ರೂಗಳ ಸಹಾಯ ಬಿಡುಗಡೆ ಮಾಡಿದ್ದರು. ಈ ಮೊತ್ತವನ್ನು ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುರುಷೋತ್ತಮ ಹಸ್ತಾಂತರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಜಾಲಿ, ಕಾರ್ಯದರ್ಶಿ ಗಿರೀಶ್, ಆಡಳಿತ ಮಂಡಳಿ ಸದಸ್ಯರಾದ ಪೆÇನ್ನಪ್ಪ, ಶಂಕರ, ಚೋಮಣಿ, ಅಶೋಕ್, ಬಿದ್ದಪ್ಪ ಇನ್ನಿತರ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.












