ಕಾರ್ಕಳ ಜೂ.16 NEWS DESK : ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 4 ರಂದು ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಎಸ್.ಡಿ.ಸುಮಂತಗೌಡ ಶೇ.99.923686 ನೊಂದಿಗೆ 596 ಅಂಕಗಳನ್ನುಗಳಿಸಿ ರಾಷ್ಟ್ರಮಟ್ಟದಲ್ಲಿ 1623ನೇ ರ‍್ಯಾಂಕ್ , ಎಸ್.ಎನ್.ಪ್ರಜ್ವಲ್ ಶೇ.99.686435 ನೊಂದಿಗೆ 588 ಅಂಕಗಳನ್ನುಗಳಿಸಿ, ರಾಷ್ಟ್ರಮಟ್ಟದಲ್ಲಿ 2483ನೇ ರ‍್ಯಾಂಕ್ , ಹೆಚ್.ಎ.ರಾಜೇಶ್ ಶೇ.99.857286 ನೊಂದಿಗೆ 583 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ 3025ನೇ ರ‍್ಯಾಂಕ್ ಪಡೆದು ಅಭೂತ ಪೂರ್ವ ಸಾಧನೆಗೈದಿದ್ದಾರೆ. ಇತರ ವಿದ್ಯಾರ್ಥಿಗಳಾದ ಸಾತ್ವಿಕ್ ಭಂಡಾರಿ 560, ಹೇಮಂತ್ ಕುಮಾರ್ 551, ಪ್ರಾಪ್ತಿಶೆಟ್ಟಿ 541, ಹೆಚ್.ಡಿ.ಪ್ರಥಮ್ ಪಟೇಲ್ 539, ಬಿ.ಎಮ್.ಸಂಗೀತಾ 536, ಡಿ.ಶ್ರೀನಿಧಿ 531, ಎಸ್.ವಿನಯ್ 523, ಬಿ.ಸ್ನೇಹಾ ಬಸವರಾಜ್ 521, ಯುವರಾಜ್ ಪಟೇಲ್ 521, ಜಿ.ಗಣೇಶ್ 519, ಶಕ್ತಿ ಎಸ್.ಗೌಡ 519, ಸೃಷ್ಟಿ ಪಾಟೀಲ್ 515, ಪಿ.ಯು.ಶ್ರೀನಿಧಿ 514, ಹೆಚ್.ಎಮ್.ನಿನಾದ್ 513, ಎಸ್.ಪಿ.ಪ್ರಥಮ್ 512, ಧ್ರುವಪಿ 509, ವೈ.ಮೇಘನಾಯ್ಡು 509, ಅಭಿನಂಧನ್ 504 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ. 500ರ ಮೇಲೆ 28 ಮಮತ್ತು 400ರ ಮೇಲೆ 192 ವಿದ್ಯಾರ್ಥಿಗಳು ಅಂಕಗಳನ್ನು ಪಡೆದಿರುತ್ತಾರೆ. ಕಳೆದ ಬಾರಿಯ ನೀಟ್ ಪರೀಕ್ಷೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳು JIPMER, AIIMS MANGALAGIRI ಮತ್ತು AIIMS NAGPUR ನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು. ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಎಸ್.ಕೆ.ಲೋಹಿತ್, ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.











