ಮಡಿಕೇರಿ ಜೂ.18 NEWS DESK : ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬಾಳಲೆ ಸಮೀಪದ ಜಾಗಲೆ ಎಂಬಲ್ಲಿ ನಡೆದಿದೆ. ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿರುವ ಕಾಕು ಎಂಬುವರ ಪುತ್ರ ಕುಳ್ಳ ಎಂಬುವವರು ಕರಡಿ ದಾಳಿಗೆ ಒಳಗಾದವರು. ನೆನ್ನೆ ರಾತ್ರಿ ಮನೆಯ ಹೊರಗಡೆ ಬಂದಿದ್ದ ಸಂದರ್ಭ ಕುಳ್ಳ ಅವರ ಮೇಲೆ ಎರಗಿರುವ ಕರಡಿ ಮುಖದ ಭಾಗಕ್ಕೆ ಹೆಚ್ಚಿನ ಗಾಯಗೊಳಿಸಿದೆ. ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.











